ADVERTISEMENT

ಹೊಸ ಜಿಎಸ್‌ಟಿ ರಿಟರ್ನ್ಸ್‌ ಜಾರಿ ವಿಳಂಬ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2019, 18:02 IST
Last Updated 31 ಮಾರ್ಚ್ 2019, 18:02 IST

ನವದೆಹಲಿ: ಸರಳೀಕೃತ ಹೊಸ ಜಿಎಸ್‌ಟಿ ರಿಟರ್ನ್ಸ್‌ ಅರ್ಜಿ ನಮೂನೆ ಜಾರಿಗೊಳಿಸುವುದನ್ನು ಸದ್ಯಕ್ಕೆ ಕೈಬಿಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಫ್ಟ್‌ವೇರ್‌ ಸಿದ್ಧವಾದ ಬಳಿಕ ಪ್ರಾಯೋಗಿಕವಾಗಿ ಅದನ್ನು ಜಾರಿಗೊಳಿಸುವ ಬಗ್ಗೆ ಅಧಿಸೂಚನೆ ಹೊರಡಿಸಲಾಗುವುದು. ಹೊಸ ಅರ್ಜಿ ನಮೂನೆಗಳಿಗಾಗಿ ವ್ಯವಸ್ಥೆಯನ್ನು ಸಿದ್ಧಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಸರಳವಾದ, ಸಹಜ್‌ ಮತ್ತು ಸುಗಮ್‌ ಎಂಬ ಎರಡು ಹೊಸ ಅರ್ಜಿ ನಮೂನೆಗಳನ್ನು 2019ರ ಏಪ್ರಿಲ್‌ 1 ರಿಂದ ಜಾರಿಗೊಳಿಸಲು 2018ರ ಜುಲೈನಲ್ಲಿ ನಿರ್ಧರಿಸಲಾಗಿತ್ತು.

ADVERTISEMENT

ಯಾವುದೇ ಖರೀದಿ ವಹಿವಾಟು ನಡೆಸದೇ ಇದ್ದರೆ, ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಬೇಡಿಕೆ ಇಲ್ಲದಿದ್ದರೆ ಅಂತಹ ತೆರಿಗೆ ಪಾವತಿದಾರರು ಹೊಸ ಅರ್ಜಿ ನಮೂನೆಯಲ್ಲಿ ಆ ತ್ರೈಮಾಸಿಕಕ್ಕೆ ‘ನಿಲ್‌’ ರಿಟರ್ನ್ಸ್‌ ತುಂಬಲು ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.