ADVERTISEMENT

ಜಿಎಸ್‌ಟಿಆರ್‌–3ಬಿ ಸಲ್ಲಿಕೆಅವಧಿ 3 ದಿನ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 19:28 IST
Last Updated 20 ಏಪ್ರಿಲ್ 2019, 19:28 IST

ನವದೆಹಲಿ: ಸರಕು ಮತ್ತು ಸೇವೆಗಳ ಮಾರಾಟದ ಮಾರ್ಚ್‌ ತಿಂಗಳ ಅಂತಿಮ ರಿಟರ್ನ್‌ (ಜಿಎಸ್‌ಟಿಆರ್‌–3ಬಿ) ಸಲ್ಲಿಸಲು ನೀಡಿದ್ದ ಗಡುವನ್ನು ಸರ್ಕಾರ ಇದೇ 23ರವರೆಗೂವಿಸ್ತರಿಸಿದೆ.

ಜಿಎಸ್‌ಟಿಆರ್‌–3ಬಿ ಸಲ್ಲಿಕೆಗೆ ಶನಿವಾರ ಅಂತಿಮ ದಿನವಾಗಿತ್ತು.

‘ಜಿಎಸ್‌ಟಿಎನ್‌ನಲ್ಲಿ ತಾಂತ್ರಿಕ ಸಮಸ್ಯೆ ಇರುವುದರಿಂದ ರಿಟರ್ನ್ಸ್‌ ಸಲ್ಲಿಕೆ ಅವಧಿಯನ್ನು ವಿಸ್ತರಿಸಲಾಗುತ್ತಿದೆ’ಎಂದು ಎಎಂಆರ್‌ಜಿ ಆ್ಯಂಡ್‌ ಅಸೋಸಿಯೇಟ್ಸ್‌ನ ಪಾಲುದಾರ ರಜತ್‌ ಮೋಹನ್‌ ತಿಳಿಸಿದ್ದಾರೆ.

ADVERTISEMENT

‘ತೆರಿಗೆ ಪಾವತಿದಾರರು ಅಂತಿಮ ದಿನಕ್ಕಾಗಿ ಕಾಯದೆ, ಮುಂಚಿತವಾಗಿಯೇ ರಿಟರ್ನ್ಸ್‌ ಸಲ್ಲಿಸುವುದನ್ನು ರೂಢಿಸಿಕೊಳ್ಳಬೇಕು. ಆಗ ಜಾಲತಾಣದ ಮೇಲಿನ ಹೊರೆ ಕಡಿಮೆಯಾಗುತ್ತದೆ’ ಎಂದೂ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.