ADVERTISEMENT

ಜಿಎಸ್‌ಟಿ ರಿಟರ್ನ್‌: 3 ವರ್ಷ ಹಿಂದಿನ ಬಾಕಿ ಸಲ್ಲಿಕೆಗೆ ಅವಕಾಶವಿಲ್ಲ

ಪಿಟಿಐ
Published 31 ಅಕ್ಟೋಬರ್ 2025, 14:10 IST
Last Updated 31 ಅಕ್ಟೋಬರ್ 2025, 14:10 IST
ಪ್ರತಿ ಗಂಟೆಗೆ 80 ಸಾವಿರ ಜಿಎಸ್‌ಟಿ ರಿಟರ್ನ್‌ ಸಲ್ಲಿಕೆ
ಪ್ರತಿ ಗಂಟೆಗೆ 80 ಸಾವಿರ ಜಿಎಸ್‌ಟಿ ರಿಟರ್ನ್‌ ಸಲ್ಲಿಕೆ   

ನವದೆಹಲಿ: ಮೂರು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸಲು ಬಾಕಿ ಇರುವವರಿಗೆ ನವೆಂಬರ್‌ ತೆರಿಗೆ ಅವಧಿಯ ಬಳಿಕ ರಿಟರ್ನ್ಸ್ ಸಲ್ಲಿಸಲು ಅವಕಾಶವಿಲ್ಲ ಎಂದು ಜಿಎಸ್‌ಟಿ ನೆಟ್‌ವರ್ಕ್‌(ಜಿಎಸ್‌ಟಿಎನ್‌) ತಿಳಿಸಿದೆ.

ಜಿಎಸ್‌ಟಿ ನೋಂದಾಯಿತ ವ್ಯವಹಾರಗಳು ಮಾಸಿಕ, ತ್ರೈಮಾಸಿಕ ಮತ್ತು ವಾರ್ಷಿಕ ಜಿಎಸ್‌ಟಿ ರಿಟರ್ನ್ಸ್ ಅನ್ನು ನಿಗದಿತ ಅವಧಿಗಿಂತ ಮೂರು ವರ್ಷಗಳ ಬಳಿಕ ಸಲ್ಲಿಸಲು ಸಾಧ್ಯವಿಲ್ಲ ಎಂದು ಜಿಎಸ್‌ಟಿಎನ್‌ ಬಿಡುಗಡೆಗೊಳಿಸಿರುವ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

‘ನವೆಂಬರ್‌ ತೆರಿಗೆ ಅವಧಿಯಿಂದಲೇ ಜಿಎಸ್‌ಟಿ ಪೋರ್ಟಲ್‌ನಲ್ಲಿ ಈ ನಿರ್ಬಂಧ ಹೇರಲಾಗುತ್ತದೆ’ ಎಂದು ಜಿಎಸ್‌ಟಿಎನ್‌ ಹೇಳಿದೆ.

ADVERTISEMENT

2022 ಅಕ್ಟೋಬರ್‌ನಿಂದ ಬಾಕಿ ಇರುವ ಜಿಎಸ್‌ಟಿಆರ್‌–1 ಮತ್ತು ಜಿಎಸ್‌ಟಿಆರ್‌–3ಬಿಯ ಮಾಸಿಕ ಹಾಗೂ 2020–21ನೇ ಸಾಲಿನ ವಾರ್ಷಿಕ ಜಿಎಸ್‌ಟಿ ರಿಟರ್ನ್ ಸಲ್ಲಿಸಲು ಡಿಸೆಂಬರ್‌ 1ರಿಂದ ಅವಕಾವಿಲ್ಲ ಎಂದು ಜಿಎಸ್‌ಟಿಎನ್‌ ಮಾರ್ಗಸೂಚಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.