ADVERTISEMENT

GST ಪರಿಷ್ಕರಣೆ: ಯಾವೆಲ್ಲ ವಸ್ತುಗಳಿಗೆ ಶೂನ್ಯ ತೆರಿಗೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಸೆಪ್ಟೆಂಬರ್ 2025, 13:19 IST
Last Updated 4 ಸೆಪ್ಟೆಂಬರ್ 2025, 13:19 IST
<div class="paragraphs"><p>ಜಿಎಸ್‌ಟಿ</p></div>

ಜಿಎಸ್‌ಟಿ

   

ನವದೆಹಲಿ: ದಿನ ಬಳಕೆಯ ಹಲವು ಪದಾರ್ಥಗಳು ಸೇರಿದಂತೆ ರಕ್ಷಣಾ ಸಾಮಗ್ರಿಗಳ ವರಗೆ ವಿವಿಧ ರೀತಿಯ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ತೆಗೆದುಹಾಕಲಾಗಿದೆ.

ಬುಧವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.

ADVERTISEMENT

‌ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಸದ್ಯ ಇರುವ ನಾಲ್ಕೂ ಹಂತಗಳಲ್ಲಿ ತೆರಿಗೆ ವ್ಯಾಪ್ತಿಯಲ್ಲಿದ್ದ ಹಲವು ಪದಾರ್ಥಗಳಿಗೆ ತೆರಿಗೆ ವಿನಾಯಿತಿ ಸಿಕ್ಕಿರುವುದರಿಂದ, ಜನಸಾಮಾನ್ಯರು ನಿರಾಳರಾಗಿದ್ದಾರೆ.

ಪರಿಷ್ಕೃತ ದರ ಸೆಪ್ಟೆಂಬರ್‌ 22ರಿಂದ ಜಾರಿಯಾಗಲಿದೆ.

ತೆರಿಗೆ ವಿನಾಯಿತಿ ಪಡೆದ ವಸ್ತುಗಳು

ಆಹಾರ ಪದಾರ್ಥಗಳು

  • ‘ಯುಎಚ್‌ಟಿ (ಅಲ್ಟ್ರಾ ಹೈ ಟೆಂಪರೇಚರ್‌) ಹಾಲು: ಶೇ 5ರಿಂದ 0

  • ಪನೀರ್‌: ಶೇ 5ರಿಂದ 0

  • ಫಿಜ್ಜಾ ತಯಾರಿಗೆ ಬಳಸುವ ಬ್ರೆಡ್‌: ಶೇ 5ರಿಂದ 0

  • ಚಪಾತಿ: ಶೇ 5ರಿಂದ 0

  • ಪರೋಟ, ಬ್ರೆಡ್‌: ಶೇ 18ರಿಂದ 0

ಆರೋಗ್ಯ

ಶೇ 5ರಷ್ಟು ಹಾಗೂ ಶೇ 12 ರಷ್ಟು ತೆರಿಗೆ ವ್ಯಾಪ್ತಿಯಲ್ಲಿದ್ದ ವಿವಿಧ ರೀತಿಯ ಔಷಧಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ.

ಶಿಕ್ಷಣ

  • ಎರೇಸರ್‌: ಶೇ 5ರಿಂದ 0

  • ಅಟ್ಲಾಸ್‌ ಸೇರಿದಂತೆ ವಿವಿಧ ರೀತಿಯ ಭೂಪಟಗಳು: ಶೇ 12ರಿಂದ 0

  • ಪೆನ್ಸಿಲ್‌, ಪೆನ್ಸಿಲ್‌ ಶಾರ್ಪನರ್‌, ಬಣ್ಣದ ಬಳಪ: ಶೇ 12ರಿಂದ 0

  • ನೋಟ್‌ಬುಕ್‌, ಅಭ್ಯಾಸ ಪುಸ್ತಕ, ಪ್ರಾಯೋಗಿಕ ಪುಸ್ತಕ: ಶೇ 12ರಿಂದ 0

ಕಾಗದ

ಸಂಸ್ಕರಿಸದ ಕಾಗದ ಹಾಗೂ ಪಠ್ಯಪುಸ್ತಕ, ನೋಟ್‌ಬುಕ್‌ಗಳಿಗೆ ಬಳಸುವ ರಟ್ಟು: ಶೇ 5ರಿಂದ 0

ವಿಮೆ

  • ಎಲ್ಲಾ ವೈಯಕ್ತಿಕ ಆರೋಗ್ಯ ವಿಮೆ: ಶೇ 18ರಿಂದ 0

  • ಎಲ್ಲಾ ವೈಯಕ್ತಿಕ ಜೀವ ವಿಮೆ: ಶೇ 18ರಿಂದ 0

ರಕ್ಷಣೆ ಹಾಗೂ ಇತರ ಸೇವೆಗಳು

  • ಮಾನವರಹಿತ ಕ್ಯಾಮೆರಾ ಆಧಾರಿತ ವಿಮಾನಗಳು: ಶೇ 18ರಿಂದ 0

  • ಕಲಾಕೃತಿಗಳು ಮತ್ತು ಪ್ರಾಚೀನ ವಸ್ತುಗಳು: ಶೇ 18ರಿಂದ 0

  • ವಿಮಾನ ಚಲನೆ ನಿಯಂತ್ರಕ ಹಾಗೂ ಇತರ ಬಿಡಿ ಭಾಗಗಳು: ಶೇ 18ರಿಂದ 0

  • ಕಚ್ಚಾ ಹಾಗೂ ಪಾಲಿಷ್‌ ಮಾಡಿದ ವಜ್ರ: ಶೇ 18ರಿಂದ 0

  • ಕಡಿಮೆ ಶಬ್ಧದ ಧ್ವನಿವರ್ದಕಗಳು: ಶೇ 18ರಿಂದ 0

  • ಸಮಗ್ರ ವಾಯುರಕ್ಷಣಾ ಶಸ್ತ್ರಾಸ್ತ್ರ ವ್ಯವಸ್ಥೆಗೆ ಸಂಬಂಧಿಸಿದ ವಸ್ತುಗಳು: ಶೇ 18ರಿಂದ 0

  • ಸೇನಾ ಸರಬರಾಜು ವಿಮಾನ: ಶೇ 18ರಿಂದ 0

  • ರಕ್ಷಣಾ ನೌಕೆಗಳು: ಶೇ 18ರಿಂದ 0

  • ಮಾನವರಹಿತ ನೌಕೆಗಳು: ಶೇ 18ರಿಂದ 0

  • ಯುದ್ಧ ವಿಮಾನಗಳಲ್ಲಿ ತುರ್ತು ಸಂದರ್ಭದಲ್ಲಿ ಹೊರನೂಕುವ ಆಸನ: ಶೇ 18ರಿಂದ 0

  • ಡ್ರೋನ್‌ಗಳಿಗೆ ಬಳಸುವ ಶಕ್ತಿಶಾಲಿ ಬ್ಯಾಟರಿಗಳು, ಸುಧಾರಿತ ಸಾಮಗ್ರಿಗಳು: ಶೇ 18ರಿಂದ 0

  • ನೌಕೆಗಳಿಂದ ಉಡಾಯಿಸಬಹುದಾದ ಕ್ಷಿಪಣಿಗಳು: ಶೇ 18ರಿಂದ 0

  • ಸೇನಾ ಬಳಕೆಯ ರಿಮೋಟ್ ಆಧಾರಿತ ವಿಮಾನ: ಶೇ 18ರಿಂದ 0

  • ಫಿರಂಗಿ, ರೈಫಲ್ಸ್‌ನಂತಹ ಶಸ್ತ್ರಾಸ್ತ್ರಗಳ ಬಿಡಿ ಭಾಗಗಳು, ಉಪ-ಜೋಡಣೆಗಳು, ಪರಿಕರಗಳು, ಪರೀಕ್ಷಾ ಉಪಕರಣಗಳು: ಶೇ 18ರಿಂದ 0

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.