
ನವದೆಹಲಿ: ವಾಷಿಂಗ್ ಮಷಿನ್, ರೆಫ್ರಿಜರೇಟರ್ ಹಾಗೂ ಇತರ ಹಲವು ಗೃಹೋಪಯೋಗಿ ಉಪಕರಣಗಳನ್ನು ತಯಾರಿಸುವ ಹಾಯರ್ ಇಂಡಿಯಾ ಕಂಪನಿಯ ಶೇಕಡ 49ರಷ್ಟು ಷೇರುಗಳನ್ನು ಖರೀದಿಸಲು ಭಾರ್ತಿ ಎಂಟರ್‌ಪ್ರೈಸಸ್ ಮತ್ತು ವಾರ್‌ಬರ್ಗ್ ಪಿಂಕಸ್ ಒಪ್ಪಿವೆ.
ಖರೀದಿಯ ನಂತರವೂ ಕಂಪನಿಯ ಆಡಳಿತದ ನಿಯಂತ್ರಣವು ಈಗಿನ ಚೀನಿ ಮಾಲೀಕರ ಕೈಯಲ್ಲೇ ಮುಂದುವರಿಯಲಿದೆ. ಅಂದಾಜು ₹17,955 ಕೋಟಿ ಮೊತ್ತಕ್ಕೆ ಈ ಖರೀದಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಈ ಖರೀದಿಯ ನಂತರದಲ್ಲಿ ಭಾರ್ತಿ ಮತ್ತು ವಾರ್‌ಬರ್ಗ್ ಪಿಂಕಸ್ ಜಂಟಿಯಾಗಿ ಹಾಯರ್ ಅಪ್ಲಯೆನ್ಸಸ್ ಇಂಡಿಯಾ ಲಿ. ಕಂಪನಿಯಲ್ಲಿ ಶೇಕಡ 49ರಷ್ಟು ಷೇರು ಹೊಂದಲಿವೆ. ಚೀನಾ ಮೂಲದ ಹಾಯರ್ ಸಮೂಹವು ಶೇ 49ರಷ್ಟು ಷೇರು ಹೊಂದಿರಲಿದೆ. ಇನ್ನುಳಿದ ಶೇ 2ರಷ್ಟು ಷೇರುಗಳು ಹಾಯರ್ ಇಂಡಿಯಾದ ಆಡಳಿತದ ಚುಕ್ಕಾಣಿ ಹಿಡಿದಿರುವ ತಂಡದ ಬಳಿ ಇರಲಿವೆ.
ಸಜ್ಜನ್ ಜಿಂದಾಲ್ ನೇತೃತ್ವದ ಜೆಎಸ್‌ಡಬ್ಲ್ಯೂ ಸಮೂಹ, ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕೂಡ ಈ ಖರೀದಿಗೆ ಆಸಕ್ತಿ ತೋರಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.