ಬೆಂಗಳೂರು: ಹಾಲು, ಹಾಲಿನ ಉತ್ಪನ್ನ ಮತ್ತು ಐಸ್‌ಕ್ರೀಂ ಉದ್ಯಮದಲ್ಲಿ ಮನೆಮಾತಾಗಿರುವ ಹ್ಯಾಂಗ್ಯೊ, ಇದೀಗ ಸಾಂಪ್ರದಾಯಿಕವಾಗಿ ತಯಾರಿಸಿದ ಹಸುವಿನ ತುಪ್ಪವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಬೆಲೆ 500 ಎಂಎಲ್‌ಗೆ ₹ 250 ಇದೆ.
‘ಸೌದೆ ಒಲೆಯಲ್ಲಿ ಬೆಣ್ಣೆ ಕಾಯಿಸಿ ತುಪ್ಪ ತಯಾರಿಸಲಾಗಿದೆ. ಇದರಿಂದಾಗಿ ಗುಣಮಟ್ಟ ಮತ್ತು ರುಚಿ ಎರಡೂ ಅತ್ಯುತ್ತಮವಾಗಿದೆ ’ ಎಂದು ಹ್ಯಾಂಗ್ಯೊ ಐಸ್‌ಕ್ರೀಮ್ಸ್‌ನ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಎಸ್.ಎಸ್. ಮಂಜುನಾಥ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.