ADVERTISEMENT

ಎಚ್‌ಸಿಎಲ್‌ ಟೆಕ್‌: ₹ 4,096 ಕೋಟಿ ನಿವ್ವಳ ಲಾಭ

ಪಿಟಿಐ
Published 12 ಜನವರಿ 2023, 19:45 IST
Last Updated 12 ಜನವರಿ 2023, 19:45 IST
   

ನವದೆಹಲಿ: ಎಚ್‌ಸಿಎಲ್‌ ಟೆಕ್ನಾಲಜೀಸ್ ಕಂಪನಿಯು ಡಿಸೆಂಬರ್‌ ತ್ರೈಮಾಸಿಕದಲ್ಲಿ ಮಾರುಕಟ್ಟೆ ನಿರೀಕ್ಷೆಗಳನ್ನೂ ಮೀರಿ ₹ 4,096 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹ 3,442 ಕೋಟಿ ನಿವ್ವಳ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿಯ ಲಾಭವು ಶೇ 19ರಷ್ಟು ಏರಿಕೆ ಆಗಿದೆ. ವರಮಾನವು ₹ 22,331 ಕೋಟಿಯಿಂದ ₹ 26,700 ಕೋಟಿಗೆ (ಶೇ 19.56) ಏರಿಕೆ ಕಂಡಿದೆ. ತ್ರೈಮಾಸಿಕದಲ್ಲಿ 17 ಒಪ್ಪಂದಗಳನ್ನು ಮಾಡಿಕೊಂಡಿರುವುದೇ ಕಂಪನಿಯ ಲಾಭದಲ್ಲಿ ಭಾರಿ ಏರಿಕೆಗೆ ಕಾರಣವಾಗಿದೆ.

ತ್ರೈಮಾಸಿಕದಲ್ಲಿ 2,945 ಮಂದಿ ನೇಮಕ ಆಗಿದ್ದು, ಒಟ್ಟು ಸಿಬ್ಬಂದಿ ಸಂಖ್ಯೆ 2,22,270ಕ್ಕೆ ತಲುಪಿದೆ. ಕಂಪನಿಯು ಪೂರ್ತಿವರ್ಷಕ್ಕೆ ವರಮಾನವು ಶೇ 13.5 ರಿಂದ ಶೇ 14ರಷ್ಟು ಬೆಳವಣಿಗೆ ಕಾಣಲಿದೆ ಎಂದು ಹೇಳಿದೆ. ಶೇ 13.5 ರಿಂದ ಶೇ 14.5ರವರೆಗೆ ಬೆಳವಣಿಗೆ ಕಾಣಲಿದೆ ಎಂದು ಈ ಮೊದಲು ಅಂದಾಜು ಮಾಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.