ನವದೆಹಲಿ: ಪ್ರಸಕ್ತ ಹಣಕಾಸು ತ್ರೈಮಾಸಿಕದಲ್ಲಿ (ಜುಲೈ–ಸೆಪ್ಟೆಂಬರ್ ಅವಧಿ) ಜರ್ಮನಿ, ಫ್ರಾನ್ಸ್, ಸ್ಪೇನ್ ಮತ್ತು ಬ್ರಿಟನ್ ಮಾರುಕಟ್ಟೆ ಪ್ರವೇಶಿಸುವ ಯೋಜನೆ ಇದೆ ಎಂದು ಹೀರೊ ಮೋಟೊಕಾರ್ಪ್ ಅಧ್ಯಕ್ಷ ಪವನ್ ಮುಂಜಾಲ್ ಹೇಳಿದ್ದಾರೆ.
ಕಂಪನಿಯ ವಾರ್ಷಿಕ ವರದಿಯಲ್ಲಿ ಅವರು ಷೇರುದಾರರನ್ನು ಉದ್ದೇಶಿಸಿ ಈ ವಿಷಯ ತಿಳಿಸಿದ್ದಾರೆ. ವಿದ್ಯುತ್ ಚಾಲಿತ ವಾಹನಗಳ ವಿಭಾಗದಲ್ಲಿ ಕಂಪನಿಯ ನಾಯಕತ್ವದ ಸ್ಥಾನವನ್ನು ಇನ್ನಷ್ಟು ಮುಂದಕ್ಕೆ ಒಯ್ಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
‘ನಾವು 2024–25ರಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದಕ್ಷಿಣ ಏಷ್ಯಾದಿಂದ ಲ್ಯಾಟಿನ್ ಅಮೆರಿಕದವರೆಗೆ ಶೇ 43ರಷ್ಟು ಬೆಳವಣಿಗೆ ಸಾಧಿಸಿದ್ದೇವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.