ADVERTISEMENT

ಮೂರು ದಿನ ಹೈಲೈಫ್ ಜ್ಯುವೆಲ್ಸ್‌ ಪ್ರದರ್ಶನ

ಪ್ರದರ್ಶನಕ್ಕೆ ಚಾಲನೆ ನೀಡಿದ ನಟಿ ನಂದಿತಾ ಶ್ವೇತಾ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 20:16 IST
Last Updated 26 ಜುಲೈ 2024, 20:16 IST
ಬೆಂಗಳೂರಿನ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಶುಕ್ರವಾರ ಹೈಲೈಫ್‌ ಜ್ಯುವೆಲ್ಸ್‌ ಆಯೋಜಿಸಿರುವ ಆಭರಣ ಪ್ರದರ್ಶನಕ್ಕೆ ನಟಿ ನಂದಿತಾ ಶ್ವೇತಾ ಚಾಲನೆ ನೀಡಿದರು. ಹೈಲೈಫ್‌ ಎಕ್ಸಿಬಿಷನ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಬಿ ಪಿ. ಡೊಮಿನಿಕ್‌ ಮತ್ತು ರೂಪದರ್ಶಿಯರು ಹಾಜರಿದ್ದರು
ಬೆಂಗಳೂರಿನ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಶುಕ್ರವಾರ ಹೈಲೈಫ್‌ ಜ್ಯುವೆಲ್ಸ್‌ ಆಯೋಜಿಸಿರುವ ಆಭರಣ ಪ್ರದರ್ಶನಕ್ಕೆ ನಟಿ ನಂದಿತಾ ಶ್ವೇತಾ ಚಾಲನೆ ನೀಡಿದರು. ಹೈಲೈಫ್‌ ಎಕ್ಸಿಬಿಷನ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಬಿ ಪಿ. ಡೊಮಿನಿಕ್‌ ಮತ್ತು ರೂಪದರ್ಶಿಯರು ಹಾಜರಿದ್ದರು   

ಬೆಂಗಳೂರು: ಪ್ರೀಮಿಯಂ ಆಭರಣ ಪ್ರದರ್ಶಕ ಹೈಲೈಫ್ ಜ್ಯುವೆಲ್ಸ್‌, ನಗರದ ತಾಜ್‌ ವೆಸ್ಟ್‌ ಎಂಡ್‌ನಲ್ಲಿ ಆಯೋಜಿಸಿರುವ ಆಭರಣ ಪ್ರದರ್ಶನಕ್ಕೆ ನಟಿ ನಂದಿತಾ ಶ್ವೇತಾ  ಶುಕ್ರವಾರ ಚಾಲನೆ ನೀಡಿದರು.

‘ಹೈಲೈಫ್‌ ಎಕ್ಸಿಬಿಷನ್‌ ಭಾರತ ಸೇರಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಫ್ಯಾಷನ್‌, ಐಷಾರಾಮಿ ಆಭರಣಗಳನ್ನು ಪ್ರದರ್ಶನ ಮಾಡುವ ಮೂಲಕ ಗ್ರಾಹಕರಿಗೆ ಉತ್ತಮ ಆಭರಣಗಳನ್ನು ಒದಗಿಸುವ ವೇದಿಕೆಯಾಗಿದೆ’ ಎಂದು ಹೈಲೈಫ್‌ ಎಕ್ಸಿಬಿಷನ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಬಿ ಪಿ. ಡೊಮಿನಿಕ್‌ ಹೇಳಿದರು.

ವೈವಿಧ್ಯಮಯ ಶೈಲಿ, ಸಾಂಪ್ರದಾಯಿಕ ಕಲಾತ್ಮಕತೆ ಹೊಂದಿರುವ ಆಭರಣಗಳು ಪ್ರದರ್ಶನದಲ್ಲಿವೆ. ಜುಲೈ 26ರಿಂದ 28ರ ವರೆಗೆ ಈ ಪ್ರದರ್ಶನ ನಡೆಯಲಿದ್ದು, 100ಕ್ಕೂ ಹೆಚ್ಚು ಪ್ರಸಿದ್ಧ ಆಭರಣ ಬ್ರ್ಯಾಂಡ್‌ಗಳು ಮತ್ತು ವಿನ್ಯಾಸಕರು ಭಾಗವಹಿಸಲಿದ್ದಾರೆ ಎಂದರು.

ಕೇಂದ್ರ ಸರ್ಕಾರವು ಚಿನ್ನ ಮತ್ತು ಬೆಳ್ಳಿ ಮೇಲಿನ ಕಸ್ಟಮ್ಸ್‌ ಸುಂಕ ಕಡಿತಗೊಳಿಸಿದೆ. ಇದರಿಂದ ಚಿನ್ನ ಮತ್ತು ಬೆಳ್ಳಿ ಮಾರಾಟ ಹೆಚ್ಚಾಗುವ ನಿರೀಕ್ಷೆಯಿದೆ. ಸುಂಕ ಕಡಿತದ ಲಾಭವು ಗ್ರಾಹಕರಿಗೆ ದೊರೆಯಲಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಅಬಿ ಉತ್ತರಿಸಿದರು.

‘ಮಹಿಳೆಯರಿಗೆ ಚಿನ್ನ ಅಂದರೆ ಅಚ್ಚುಮೆಚ್ಚು. ಹೈಲೈಫ್ ಜ್ಯುವೆಲ್ಸ್‌ ಆಯೋಜಿಸಿರುವ ಈ ಪ್ರದರ್ಶನದಲ್ಲಿ ಮಹಿಳೆಯರಿಗೆ ಒಪ್ಪುವಂತಹ ಆಭರಣಗಳಿವೆ’ ಎಂದು ನಟಿ ನಂದಿತಾ ಶ್ವೇತಾ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ರೂಪದರ್ಶಿಯರು, ಆಭರಣ ತಯಾರಕರು, ಸಿಬ್ಬಂದಿ ಮತ್ತು ಗ್ರಾಹಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.