ADVERTISEMENT

ಪೆಟ್ರೋಕೆಮಿಕಲ್‌ ಯೋಜನೆಗೆ ಅದಾನಿ ಸಮೂಹದಿಂದ ತಡೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 19:22 IST
Last Updated 19 ಮಾರ್ಚ್ 2023, 19:22 IST
   

ನವದೆಹಲಿ: ಅದಾನಿ ಸಮೂಹವು ಗುಜರಾತ್‌ನ ಮುಂದ್ರಾದಲ್ಲಿ ₹39 ಸಾವಿರ ಕೋಟಿ ಮೊತ್ತದ ಪೆಟ್ರೋಕೆಮಿಕಲ್‌ ಘಟಕ ನಿರ್ಮಾಣ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ಮೂಲಗಳು ಹೇಳಿವೆ.

ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್‌ ವರದಿ ಬಂದ ಬಳಿಕ ಅದಾನಿ ಸಮೂಹವು ಹೂಡಿಕೆದಾರರ ಆತಂಕ ದೂರಮಾಡಲು ಮತ್ತು ಕಾರ್ಯಾಚರಣೆಯನ್ನು ಬಲಪಡಿಸಲು ಗಮನ ಹರಿಸಲು ಆರಂಭಿಸಿದೆ. ಹೀಗಾಗಿ ಈ ನಿರ್ಧಾರಕ್ಕೆ ಬಂದಿದೆ ಎಂದು ತಿಳಿಸಿವೆ.

ಸಾಲ ಮರುಪಾವತಿ ಮಾಡುವುದು, ಕಾರ್ಯಾಚರಣೆ ಯನ್ನು ಇನ್ನಷ್ಟು ಬಲಪಡಿಸುವುದು ಹಾಗೂ ಆರೋಪಗಳ ವಿರುದ್ಧ ಹೋರಾಟ ನಡೆಸುವ ಸಂಬಂಧ ಸಮೂಹವು ಕಾರ್ಯತಂತ್ರ ರೂಪಿಸುತ್ತಿದೆ ಎಂದು ಹೇಳಿವೆ.

ADVERTISEMENT

ಜನವರಿ 24ರಂದು ಹಿಂಡನ್‌ಬರ್ಗ್‌ ವರದಿ ಪ್ರಕಟವಾದ ಬಳಿಕ ಅದಾನಿ ಸಮೂಹದ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ₹11.48 ಲಕ್ಷ ಕೋಟಿ ನಷ್ಟವಾಗಿದೆ.

ಹಿಂಡನ್‌ಬರ್ಗ್‌ ಸಂಸ್ಥೆಯು ಮಾಡಿರುವ ಎಲ್ಲಾ ಆರೋಪಗಳನ್ನು ಸಮೂಹವು ನಿರಾಕರಿಸಿದೆ. ಇದರ ಭಾಗವಾಗಿ ನಗದು ಹರಿವು ಮತ್ತು ಹಣಕಾಸಿನ ಪರಿಸ್ಥಿತಿಯ ಆಧಾರದ ಮೇಲೆ ತನ್ನೆಲ್ಲಾ ಯೋಜನೆಗಳ ಮರುಮೌಲ್ಯಮಾಪನ ಮಾಡುತ್ತಿದೆ. ಹೀಗಾಗಿ ವಾರ್ಷಿಕ 10 ಲಕ್ಷ ಟನ್‌ ತಯಾರಿಕಾ ಸಾಮರ್ಥ್ಯದ ಪಾಲಿವಿನೈಲ್‌ ಕ್ಲೋರೈಡ್‌ (ಪಿವಿಸಿ) ಘಟಕ ನಿರ್ಮಾಣ ಮಾಡುವ ಯೋಜನೆಯನ್ನು ಸದ್ಯದ ಮಟ್ಟಿಗೆ ಕಂಪನಿ ತಡೆಹಿಡಿದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ತಕ್ಷಣದಿಂದ ಜಾರಿಗೆ ಬರುವಂತೆ ಯೋಜನೆಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸು
ವಂತೆ ಸಮೂಹವು ಪೂರೈಕೆದಾರರು ಮತ್ತು ಮಾರಾಟಗಾರರಿಗೆ ಸಮೂಹವು ಇ–ಮೇಲ್‌ ಕಳುಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.