ADVERTISEMENT

ಹೋಂಡಾ ಕಂಪನಿಗೆ ಕರ್ನಾಟಕದಲ್ಲಿ 40 ಲಕ್ಷ ಗ್ರಾಹಕರು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 15:55 IST
Last Updated 21 ನವೆಂಬರ್ 2021, 15:55 IST

ಬೆಂಗಳೂರು:ಹೋಂಡಾ ಮೋಟಾರ್‌ ಸೈಕಲ್ ಆ್ಯಂಡ್ ಸ್ಕೂಟರ್ ಕಂಪನಿಯು ರಾಜ್ಯದಲ್ಲಿ ಒಟ್ಟು 40 ಲಕ್ಷಕ್ಕಿಂತ ಹೆಚ್ಚು ಗ್ರಾಹಕರನ್ನು ಪಡೆದಿರುವುದಾಗಿ ಹೇಳಿದೆ.

ಕರ್ನಾಟಕದಲ್ಲಿ ಮೊದಲ 20 ಲಕ್ಷ ಗ್ರಾಹಕರನ್ನು ಹೊಂದಲು ಹೋಂಡಾ ದ್ವಿಚಕ್ರ ವಾಹನ ಕಂಪನಿಯು 16 ವರ್ಷ ತೆಗೆದುಕೊಂಡಿತ್ತು. ಈಗ ಐದೇ ವರ್ಷಗಳಲ್ಲಿ ಮತ್ತೆ 20 ಲಕ್ಷ ಗ್ರಾಹಕರನ್ನು ಕಂಪನಿಯು ತನ್ನದಾಗಿಸಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ಹೊಸ ಮಾದರಿಯ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ವಿಶ್ವಾಸಾರ್ಹ ಗ್ರಾಹಕ ಸೇವೆ ಒದಗಿಸಿದ್ದು ಈ ಸಾಧನೆಗೆ ಕಾರಣವಾಗಿವೆ ಎಂದು ಕಂಪನಿ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.