ಬೆಂಗಳೂರು: ವಹಿವಾಟು ಪ್ರಕ್ರಿಯೆಯನ್ನು ಹೆಚ್ಚು ಸುರಕ್ಷತೆ ಮತ್ತು ವೇಗಗೊಳಿಸಲು ಪೇಟಿಎಂ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ.
ಪೇಟಿಎಂ ಯುಪಿಐ ಲೈಟ್ ಹಾಗೂ ಪಾವತಿಗಳಿಗೆ ಯುಪಿಐ ಲೈಟ್ ಆಟೊ ಟಾಪ್ ಅಪ್‌ನಂತಹ ಫೀಚರ್‌ಗಳನ್ನು ಅಳವಡಿಸಿದೆ. ಇದು ಪಿನ್ ಅಗತ್ಯವಿಲ್ಲದೆ ವ್ಯವಹಾರವನ್ನು ಸುಗಮಗೊಳಿಸುತ್ತದೆ. ಅಲ್ಲದೆ, ಪೇಟಿಎಂ ಆಯ್ದ ಅಂತರರಾಷ್ಟ್ರೀಯ ಸ್ಥಳಗಳಲ್ಲಿ ಸುರಕ್ಷಿತ ಪಾವತಿಗಾಗಿ ಯುಪಿಐ ಇಂಟರ್‌ನ್ಯಾಷನಲ್ ಸೇವೆಯನ್ನೂ ಒದಗಿಸುತ್ತದೆ ಎಂದು ಕಂಪನಿ ತಿಳಿಸಿದೆ.
ಜೊತೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಎಕ್ಸಿಸ್ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ ಸೇರಿ ಇತರೆ ಪ್ರಮುಖ ಬ್ಯಾಂಕ್‌ಗಳೊಂದಿಗೆ ಪೇಟಿಎಂ ಸ್ಥಿರ ಮತ್ತು ವಿಶ್ವಾಸಾರ್ಹ ಯುಪಿಐ ಸೇವೆಗಳನ್ನು ಖಾತರಿಪಡಿಸಿದೆ. ಬಳಕೆದಾರರು ಯುಪಿಐ ಸ್ಟೇಟ್‌ಮೆಂಟ್ ಡೌನ್‌ಲೋಡ್ ಮಾಡಬಹುದಾಗಿದೆ ಎಂದು ತಿಳಿಸಿದೆ.
ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಭಾರತದಲ್ಲಿ ಸುಲಭವಾಗಿ ಪಾವತಿ ಮಾಡುವುದನ್ನು ಸಂಪೂರ್ಣವಾಗಿ ಬದಲಿಸಿದೆ. ಸರಳ, ವೇಗ ಮತ್ತು ಸುರಕ್ಷಿತ ಮಾರ್ಗವನ್ನಾಗಿ ಮಾಡಿದೆ. ಯುಪಿಐ ಸಹಾಯದಿಂದ, ಬಳಕೆದಾರರು ತಕ್ಷಣವೇ ಹಣ ವರ್ಗಾವಣೆ ಮಾಡಬಹುದು. ಟಿಕೆಟ್ ಬುಕ್ ಮಾಡುವುದು, ಬಿಲ್ ಪಾವತಿಸುವಿಕೆ, ವಸ್ತುಗಳನ್ನು ಖರೀದಿಸುವುದು ಸೇರಿ ಇತರೆ ವ್ಯವಹಾರವನ್ನು ಸುಲಭಗೊಳಿಸಿದೆ ಎಂದು ತಿಳಿಸಿದೆ.
ಪೇಟಿಎಂನಲ್ಲಿ ಯುಪಿಐ ಐ.ಡಿ ರಚಿಸುವುದು ಹೇಗೆ?
ನಿಮ್ಮ ಫೋನ್‌ನಲ್ಲಿ ಪೇಟಿಎಂ ಆ್ಯಪ್ ಡೌನ್‌ಲೋಡ್ ಮಾಡಿ ಮತ್ತು ಓಪನ್ ಮಾಡಿ
ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ. ಮೊಬೈಲ್ ಸಂಖ್ಯೆಯನ್ನು ಒಟಿಪಿ ಮೂಲಕ ಪರಿಶೀಲಿಸಿ
ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿ
ಲಿಂಕ್ ಮಾಡಿದ ಖಾತೆಗಳಲ್ಲಿಂದ, ಯುಪಿಐ ವ್ಯವಹಾರಗಳಿಗೆ ನಿಮ್ಮ ಪ್ರಾಥಮಿಕ ಖಾತೆಯನ್ನು ಆಯ್ಕೆ ಮಾಡಿ
ಲಿಂಕ್ ಮಾಡಿದ ನಂತರ, ನಿಮ್ಮ ವೈಯಕ್ತಿಕ ಯುಪಿಐ ಐಡಿಯನ್ನು ರಚಿಸಲಾಗುತ್ತದೆ (ಉದಾ: @pthdfc ಅಥವಾ @ptsbi). ನೀವು ಈಗ ತಕ್ಷಣವೇ ಹಣ ಕಳುಹಿಸಲು ಮತ್ತು ಸ್ವೀಕರಿಸಲು ಪ್ರಾರಂಭಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.