ADVERTISEMENT

ಹಟ್ಟಿ: ಚಿನ್ನ ಉತ್ಪಾದನೆ ಕುಸಿತ

ಡಿಸೆಂಬರ್‌ ಅಂತ್ಯಕ್ಕೆ  901 ಕೆ.ಜಿ ಚಿನ್ನ, 4.39 ಲಕ್ಷ ಟನ್‌ ಅದಿರು ಉತ್ಪಾದನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 23:30 IST
Last Updated 24 ಜನವರಿ 2026, 23:30 IST
   

ಹಟ್ಟಿ ಚಿನ್ನದ ಗಣಿ: ಹಟ್ಟಿ ಚಿನ್ನದ ಗಣಿ ಕಂಪನಿಯು 2025ರ ಡಿಸೆಂಬರ್ ಅಂತ್ಯಕ್ಕೆ ಚಿನ್ನ ಉತ್ಪಾದನೆಯಲ್ಲಿ ನಿಗದಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಗುರಿಗಿಂತ 285 ಕೆ.ಜಿ, 511 ಗ್ರಾಂ ಉತ್ಪಾದನೆಯ ಕೊರತೆ ಆಗಿರುವುದು ಕಂಪನಿ ಅಂಕಿ ಅಂಶಗಳಿಂದ ತಿಳಿದಿದೆ.

ಪ್ರಸಕ್ತ ಸಾಲಿನಲ್ಲಿ 1,187 ಕೆ.ಜಿ ಚಿನ್ನಉತ್ಪಾದಿಸುವ ಗುರಿಯಿತ್ತು. ಆದರೆ 901 ಕೆ.ಜಿ, ಮಾತ್ರ ಉತ್ಪಾದಿಸಲಾಗಿದ್ದು, 285.5 ಕೆ.ಜಿ ಚಿನ್ನ ಉತ್ಪಾದನೆ ಕೊರತೆಯಾಗಿದೆ. 5.70 ಲಕ್ಷ ಟನ್ ಅದಿರು ಉತ್ಪಾದನೆ ಗುರಿ ಹೊಂದಲಾಗಿತ್ತು. ಆದರೆ 4.39 ಲಕ್ಷ ಟನ್ ಉತ್ಪಾದಿಸಲಾಗಿದ್ದು, 1.30 ಟನ್ ಅದಿರು ಉತ್ಪಾದನೆ ಕೊರತೆಯಾಗಿದೆ. ಇದು ಅದಿರು ಹಾಗೂ ಚಿನ್ನ ಉತ್ಪಾದನೆಯಲ್ಲಿ ಹಿನ್ನಡೆ ಆಗಿರುವುದು ಆಡಳಿತ ವೈಫಲ್ಯಕ್ಕೆ ಕನ್ನಡಿಯಾಗಿದೆ. 

ನ್ಯೂ ಸರ್ಕ್ಯೂಲರ್ ಶಾಫ್ಟ್ ಗಣಿ ಆರಂಭಗೊಂಡರೆ ಪ್ರತಿದಿನ 3 ಸಾವಿರ ಟನ್ ಅದಿರು ಉತ್ಪಾದನೆ, ವಾರ್ಷಿಕ 3 ಟನ್‌ವರೆಗೆ ಚಿನ್ನ ಉತ್ಪಾದನೆಯಾಗಲಿದೆ ಎಂಬ ಮಾತನ್ನು ಗಣಿ ಆಡಳಿತ ಹಿಂದೆ ಹೇಳಿತ್ತು. ಈಗಾಗಲೇ ನ್ಯೂ ಸರ್ಕ್ಯೂಲರ್ ಶಾಫ್ಟ್ ಗಣಿ ಆರಂಭಗೊಂಡಿದೆ. ಅದಿರು ಹಾಗೂ ಚಿನ್ನ ಉತ್ಪಾದನೆಯಲ್ಲಿ ಏನು ವ್ಯತ್ಯಾಸ ಕಾಣಿಸಿಲ್ಲ. ಇದರಿಂದ ಚಿನ್ನ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ.

ADVERTISEMENT

ಅದಿರು ಹಾಗೂ ಚಿನ್ನ ಉತ್ಪಾದನೆಯಲ್ಲಿ ಹಿನ್ನಡೆ ಅನುಭವಿಸಿದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಗಣಿ ಆಡಳಿತವರ್ಗದ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿದರೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಚಿನ್ನ ಉತ್ಪಾದನೆಯಲ್ಲಿ ಕಡಿಮೆಯಾಗಿರುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು.
-ಜಿ.ಟಿ. ಪಾಟೀಲ ಹಟ್ಟಿ ಚಿನ್ನದ ಗಣಿ ಕಂಪನಿ ನಿಗಮದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.