ADVERTISEMENT

ಹುಂಡೈ: 5 ಸಾವಿರ ಕಾರ್‌ ರಫ್ತು

ಪಿಟಿಐ
Published 30 ಮೇ 2020, 21:01 IST
Last Updated 30 ಮೇ 2020, 21:01 IST
   

ನವದೆಹಲಿ: ಹುಂಡೈ ಮೋಟರ್ ಇಂಡಿಯಾ ಕಂಪನಿಯು ಮೇ ತಿಂಗಳಿನಲ್ಲಿ 5 ಸಾವಿರ ಕಾರ್‌ಗಳನ್ನು ರಫ್ತು ಮಾಡಿದೆ.

ಮೇ 8ರಂದು ಚೆನ್ನೈ ಘಟಕದಲ್ಲಿ ತಯಾರಿಕೆಯನ್ನು ಪುನರಾರಂಭ ಮಾಡಿದ ಬಳಿಕ ಈ ಪ್ರಮಾಣದಲ್ಲಿ ರಫ್ತು ಮಾಡಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರದ ‘ಭಾರತದಲ್ಲಿಯೇ ತಯಾರಿಸಿ’ ಕಾರ್ಯಕ್ರಮಕ್ಕೆ ಬೆಂಬಲವನ್ನು ಮುಂದುವರಿಸಲಾಗಿದೆ ಎಂದು ತಿಳಿಸಿದೆ.

1999ರಿಂದ ರಫ್ತು ವಹಿವಾಟು ಆರಂಭಿಸಲಾಗಿದ್ದು, ಇದುವರೆಗೆ 88 ದೇಶಗಳಿಗೆ 30 ಲಕ್ಷ ವಾಹನಗಳನ್ನು ರಫ್ತು ಮಾಡಲಾಗಿದೆ ಎಂದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.