ADVERTISEMENT

ಆದಾಯ ತೆರಿಗೆ ರಿಟರ್ನ್ಸ್‌: ಸಹಜ್‌, ಸುಗಮ್‌ ಅರ್ಜಿ ಲಭ್ಯ

ಪಿಟಿಐ
Published 30 ಮೇ 2025, 12:46 IST
Last Updated 30 ಮೇ 2025, 12:46 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಆದಾಯ ತೆರಿಗೆ ಇಲಾಖೆಯು 2025–26ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ ಎಕ್ಸೆಲ್‌ ಆಧಾರಿತ ಐಟಿಆರ್‌ 1 (ಸಹಜ್‌) ಮತ್ತು ಐಟಿಆರ್‌ 4 (ಸುಗಮ್‌) ಅರ್ಜಿ ನಮೂನೆಗಳನ್ನು ಬಿಡುಗಡೆ ಮಾಡಿದೆ.

2024–25ನೇ ಸಾಲಿನಡಿ ಗಳಿಸಿದ ಆದಾಯಕ್ಕೆ ಈ ನಮೂನೆಯಡಿ ಅರ್ಹರಿರುವ ತೆರಿಗೆದಾರರು ರಿಟರ್ನ್ಸ್ ಸಲ್ಲಿಸಬಹುದಾಗಿದೆ ಎಂದು ಇಲಾಖೆಯು ‘ಎಕ್ಸ್’ನಲ್ಲಿ ತಿಳಿಸಿದೆ.

ವಾರ್ಷಿಕ ₹50 ಲಕ್ಷದವರೆಗೆ ಒಟ್ಟು ಆದಾಯ ಹೊಂದಿದ ತೆರಿಗೆದಾರರು, ಅವಿಭಕ್ತ ಕುಟುಂಬಗಳು ಮತ್ತು ಸಂಸ್ಥೆಗಳು ಈ ನಮೂನೆಗಳ ಅಡಿ ರಿಟರ್ನ್ಸ್‌ ಸಲ್ಲಿಸಬೇಕಿದೆ.

ADVERTISEMENT

ಪ್ರಸಕ್ತ ವರ್ಷ ಆದಾಯ ಹೊಂದಾಣಿಕೆಯ ನಿಯಮಗಳನ್ನು ಸರಳೀಕರಿಸಲಾಗಿದೆ. ಹಾಗಾಗಿ, ಸೆಪ್ಟೆಂಬರ್‌ 15ರ ವರೆಗೂ ರಿಟರ್ನ್ಸ್‌ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.