ADVERTISEMENT

ನ್ಯಾನೊ ಎನ್‌ಪಿಕೆ ಬಿಡುಗಡೆಗೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2024, 16:08 IST
Last Updated 5 ಡಿಸೆಂಬರ್ 2024, 16:08 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದ್ರವರೂಪದ ನ್ಯಾನೊ ಯೂರಿಯಾ ಮತ್ತು ದ್ರವರೂಪದ ನ್ಯಾನೊ ಡಿಎಪಿ ಅನ್ನು ಮಾರುಕಟ್ಟೆಗೆ ಪರಿಚಯಿಸಿರುವ ಇಫ್ಕೊ, ಈಗ ನ್ಯಾನೊ ಎನ್‌ಪಿಕೆ ಪೋಷಕಾಂಶವನ್ನು ಅಭಿವೃದ್ಧಿಪಡಿಸಿದೆ. ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಕೇಂದ್ರ ಸರ್ಕಾರದ ಒಪ್ಪಿಗೆಗೆ ಎದುರು ನೋಡುತ್ತಿದೆ.

ಕಾಂಡ್ಲಾ ಘಟಕದಲ್ಲಿ ನ್ಯಾನೊ ಎನ್‌ಪಿಕೆಯನ್ನು ಅಭಿವೃದ್ಧಿ‍ಪಡಿಸಲಾಗಿದೆ. ಸರ್ಕಾರದಿಂದ ಅನುಮತಿ ಸಿಕ್ಕಿದ ಬಳಿಕ ಚಿಲ್ಲರೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಇಫ್ಕೊ ವ್ಯವಸ್ಥಾಪಕ ನಿರ್ದೇಶಕ ಯು.ಎಸ್. ಅವಸ್ತಿ ತಿಳಿಸಿದ್ದಾರೆ. 

5 ಕೆ.ಜಿ ತೂಕದ ಈ ರಸಗೊಬ್ಬರ ಚೀಲಕ್ಕೆ ₹950 ದರ ನಿಗದಿಪಡಿಸಲಾಗಿದೆ. ಇದು ಮಾರುಕಟ್ಟೆಯಲ್ಲಿ ರೈತರಿಗೆ ಲಭ್ಯವಾದರೆ ಯೂರಿಯಾ ಮತ್ತು ಡಿಎಪಿ ಬಳಕೆ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.