ADVERTISEMENT

ಕೋವಿಡ್-19 ತಡೆಗೆ ಕ್ರಮ | ಭಾರತದ ಲಾಕ್‌ಡೌನ್‌ ನಿರ್ಧಾರ ಬೆಂಬಲಿಸಿದ ಐಎಂಎಫ್

ಏಜೆನ್ಸೀಸ್
Published 16 ಏಪ್ರಿಲ್ 2020, 4:41 IST
Last Updated 16 ಏಪ್ರಿಲ್ 2020, 4:41 IST
   

ವಾಷಿಂಗ್ಟನ್: ಕೋವಿಡ್–19 ಸೋಂಕು ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಿರುವ ಭಾರತ ಸರ್ಕಾರದ ಕ್ರಮವನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಬುಧವಾರ ಬೆಂಬಲಿಸಿದೆ.

‘ಆರ್ಥಿಕತೆ ಮಂದಗತಿಯಲ್ಲಿ ಸಾಗುತ್ತಿದ್ದಾಗಲೇ ಭಾರತಕ್ಕೆ ಜಾಗತಿಕ ಪಿಡುಗಿನ ಸಂಕಷ್ಟ ಎದುರಾಯಿತು. ಆರ್ಥಿಕ ಚೇತರಿಕೆಯ ನಿರೀಕ್ಷೆಯು ಅನಿಶ್ಚಿತವಾಗಿದೆ’ ಎಂದು ಐಎಂಎಫ್‌ನ ಏಷ್ಯಾ ಮತ್ತು ಪೆಸಿಫಿಕ್ ವಿಭಾಗದ ನಿರ್ದೇಶಕ ಚಾಂಗ್ ಯೋಂಗ್ ರೀ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

‘ಆರ್ಥಿಕ ಕುಸಿತದ ಹೊರತಾಗಿಯೂ, ಸರ್ಕಾರವು ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಗೆ ತಂದಿದೆ. ಭಾರತದ ಪೂರ್ವಭಾವಿ ನಿರ್ಧಾರವನ್ನು ನಾವು ಬೆಂಬಲಿಸುತ್ತೇವೆ.ಏಷ್ಯಾ–ಫೆಸಿಫಿಕ್‌ ಪ್ರದೇಶದಲ್ಲಿ ಕೊರೊನಾವೈರಸ್‌ನ ಪರಿಣಾಮವು ತೀವ್ರವಾಗಿರಲಿದೆ. 2020ರಲ್ಲಿ ಏಷ್ಯಾದ ಅಭಿವೃದ್ಧಿ ಸ್ಥಗಿತಗೊಳ್ಳಲಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ಮಾರ್ಚ್‌ 24 ರಂದು, ದೇಶದಾದ್ಯಂತ ಏಪ್ರಿಲ್‌ 14ರ ವರೆಗೆಲಾಕ್‌ಡೌನ್‌ ಘೋಷಿಸಿದ್ದ ಪ್ರಧಾನಿ ಮೋದಿ ಇದೀಗ ಎರಡನೇ ಹಂತದ ಲಾಕ್‌ಡೌನ್‌ ಘೋಷಿಸಿದ್ದಾರೆ. ಇದು ಮೇ 3ರ ವರೆಗೆ ಜಾರಿಯಲ್ಲಿರಲಿದೆ.

ಮಂಗಳವಾರವಿಶ್ವ ಆರ್ಥಿಕ ವರದಿಯನ್ನು ಬಿಡುಗಡೆ ಮಾಡಿದ್ದ ಐಎಂಎಫ್‌, ಲಾಕ್‌ಡೌನ್‌ ಘೋಷಣೆ ಪರಿಣಾಮವಾಗಿ ಭಾರತದ ಆರ್ಥಿಕ ಅಭಿವೃದ್ಧಿ ದರವು 2020ರಲ್ಲಿ ಶೇ.1.9 ರಷ್ಟು ಇರಲಿದೆ ಎಂದು ಉಲ್ಲೇಖಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.