ADVERTISEMENT

ಜಾಗತಿಕ ಆರ್ಥಿಕ ಬೆಳವಣಿಗೆ ದರ ಇಳಿಕೆ: ಐಎಂಎಫ್‌ ಸುಳಿವು

ಆಮದು ಸುಂಕ ಹೆಚ್ಚಳ, ಮಾರುಕಟ್ಟೆ ಸಮಸ್ಯೆಗಳ ಪರಿಣಾಮ

ರಾಯಿಟರ್ಸ್
Published 9 ಅಕ್ಟೋಬರ್ 2018, 6:44 IST
Last Updated 9 ಅಕ್ಟೋಬರ್ 2018, 6:44 IST
ಇಂಡೊನೇಷ್ಯಾದ ಬಾಲಿಯಲ್ಲಿ ನಡೆದ ವಿಶ್ವಬ್ಯಾಂಕ್ ಮತ್ತು ಐಎಂಎಫ್‌ನ ವಾರ್ಷಿಕ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಐಎಂಎಫ್‌ನ ಮುಖ್ಯ ಆರ್ಥಿಕ ತಜ್ಞ ಮೌರಿ ಆಬ್‌ಸ್ಟ್‌ಫೆಲ್ಡ್
ಇಂಡೊನೇಷ್ಯಾದ ಬಾಲಿಯಲ್ಲಿ ನಡೆದ ವಿಶ್ವಬ್ಯಾಂಕ್ ಮತ್ತು ಐಎಂಎಫ್‌ನ ವಾರ್ಷಿಕ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಐಎಂಎಫ್‌ನ ಮುಖ್ಯ ಆರ್ಥಿಕ ತಜ್ಞ ಮೌರಿ ಆಬ್‌ಸ್ಟ್‌ಫೆಲ್ಡ್   

ಬಾಲಿ (ಇಂಡೊನೇಷ್ಯಾ): ಆಮದು ಸುಂಕ ಹೆಚ್ಚಳ, ವ್ಯಾಪಾರ ನೀತಿಯ ಒತ್ತಡಗಳು ಹಾಗೂ ಇತರ ನವೋದ್ಯಮ ಮಾರುಕಟ್ಟೆ ಸಮಸ್ಯೆಗಳಿಂದಾಗಿ 2018–19ನೇ ಸಾಲಿನ ಜಾಗತಿಕ ಆರ್ಥಿಕ ಬೆಳವಣಿಗೆ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎಂದು ಐಎಂಎಫ್ (ಅಂತರರಾಷ್ಟ್ರೀಯ ಹಣಕಾಸು ನಿಧಿ) ಅಂದಾಜಿಸಿದೆ.

2018–19ನೇ ಸಾಲಿನಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆ ಪ್ರಮಾಣ ಶೇ 3.9ರಷ್ಟಿರಲಿದೆ ಎಂದು ಐಎಂಎಫ್ ಜುಲೈನಲ್ಲಿ ಅಂದಾಜಿಸಿತ್ತು. ಆದರೆ ಇದೀಗ, ಮುಂದಿನೆರಡು ಹಣಕಾಸು ವರ್ಷಗಳಲ್ಲಿಜಾಗತಿಕ ಆರ್ಥಿಕ ಬೆಳವಣಿಗೆ ಪ್ರಮಾಣ ಶೇ 3.7ರಷ್ಟಿರಲಿದೆ ಎಂದು ಮುನ್ಸೂಚನೆ ನೀಡಿದೆ.

ಇಂಡೊನೇಷ್ಯಾದ ಬಾಲಿಯಲ್ಲಿ ನಡೆದ ವಿಶ್ವಬ್ಯಾಂಕ್ ಮತ್ತು ಐಎಂಎಫ್‌ನ ವಾರ್ಷಿಕ ಸಭೆಯ ವೇಳೆಆರ್ಥಿಕ ಬೆಳವಣಿಗೆ ಪ್ರಮಾಣದ ಮುನ್ಸೂಚನೆ ಬಿಡುಗಡೆ ಮಾಡಲಾಯಿತು.

ADVERTISEMENT

ಅಮೆರಿಕ ಮತ್ತು ಚೀನಾ ನಡುವಣ ವಾಣಿಜ್ಯ ಸಮರ, ಯುರೋಪ್‌ ವಲಯದ ರಾಷ್ಟ್ರಗಳಲ್ಲಿ ವಹಿವಾಟು ಕುಸಿತ, ಅರ್ಜೆಂಟಿನಾ, ಬ್ರೆಜಿಲ್, ಟರ್ಕಿ, ದಕ್ಷಿಣ ಆಫ್ರಿಕಾದಂತಹ ರಾಷ್ಟ್ರಗಳಲ್ಲಿ ಬಡ್ಡಿ ದರ ಹೆಚ್ಚಳದಿಂದಾಗಿ ಬಂಡವಾಳ ಹೊರಹರಿವು ಹೆಚ್ಚಿರುವುದು ಹಾಗೂ ಇತರ ಮಾರುಕಟ್ಟೆ ಸಮಸ್ಯೆಗಳುಆರ್ಥಿಕ ಬೆಳವಣಿಗೆ ಕುಸಿತಕ್ಕೆ ಕಾರಣ ಎನ್ನಲಾಗಿದೆ.

‘ಆರ್ಥಿಕತೆಗೆ ಉತ್ತೇಜನ ನೀಡುವ ಅಂಶಗಳಿಗೆ ಹಿನ್ನಡೆಯಾದಾಗ ಅಮೆರಿಕದ ಆರ್ಥಿಕ ಬೆಳವಣಿಗೆಯೂ ಕುಸಿಯಲಿದೆ. ಸದ್ಯದ ಮಾರುಕಟ್ಟೆ ಬೇಡಿಕೆ, ಚೀನಾದಿಂದ ಆಮದಾಗುವ ಸರಕುಗಳ ಮೇಲೆ ಹೆಚ್ಚಿನ ಸುಂಕ ವಿಧಿಸಿದ್ದು ಮತ್ತು ಅದಕ್ಕೆ ಚೀನಾ ಕೈಗೊಂಡಿ ಪ್ರತೀಕಾರದ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು 2019ರಲ್ಲಿ ಅಮೆರಿಕದ ಆರ್ಥಿಕ ಬೆಳವಣಿಗೆ ಪ್ರಮಾಣ ಕಡಿಮೆ ಇರುವ ಬಗ್ಗೆ ಅಂದಾಜಿಸಲಾಗಿದೆ’ ಎಂದು ಐಎಂಎಫ್‌ನ ಮುಖ್ಯ ಆರ್ಥಿಕ ತಜ್ಞಮೌರಿ ಆಬ್‌ಸ್ಟ್‌ಫೆಲ್ಡ್ ಹೇಳಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.