ADVERTISEMENT

ಚೀನಾ ಅತ್ಯಂತ ವೇಗವಾಗಿ ಚೇತರಿಸಿಕೊಳ್ಳುತ್ತಿದೆ: ಐಎಂಎಫ್‌

ಪಿಟಿಐ
Published 10 ಜನವರಿ 2021, 16:50 IST
Last Updated 10 ಜನವರಿ 2021, 16:50 IST

ವಾಷಿಂಗ್ಟನ್‌: ವಿಶ್ವದ ಅತಿದೊಡ್ಡ ಆರ್ಥಿಕತೆಗಳಿಗೆ ಹೋಲಿಸಿದರೆ ಚೀನಾದ ಆರ್ಥಿಕತೆಯು ಅತ್ಯಂತ ವೇಗವಾಗಿ ಚೇತರಿಕೆ ಕಾಣುತ್ತಿದೆ. ಆದರೆ ಚೇತರಿಕೆಯು ಸಮತೋಲನದಿಂದ ಕೂಡಿಲ್ಲ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಹೇಳಿದೆ.

ಚೀನಾದ ಚೇತರಿಕೆಯು ಈಗಲೂ ಸಾರ್ವಜನಿಕರು ಮಾಡುವ ವೆಚ್ಚಗಳನ್ನೇ ನಂಬಿಕೊಂಡಿದೆ. ಖಾಸಗಿ ಹೂಡಿಕೆಯು ಈಚೆಗಷ್ಟೇ ಹೆಚ್ಚಾಗಿದೆ. ಆದರೆ ಕೋವಿಡ್‌ಗೂ ಮುಂಚಿನ ಮಟ್ಟಕ್ಕೆ ಹೋಲಿಸಿದರೆ ಖರೀದಿ ಪ್ರಮಾಣ ಕಡಿಮೆ ಇದೆ ಎಂದು ಐಎಂಎಫ್‌ನ ಏಷ್ಯಾ ಮತ್ತು ಪೆಸಿಫಿಕ್‌ ಇಲಾಖೆಯ ಸಹಾಯಕ ನಿರ್ದೇಶಕ ಹಲ್ಗ್‌ ಬರ್ಗರ್‌ ಹೇಳಿದ್ದಾರೆ.

2020ರಲ್ಲಿ ಚೀನಾದ ಬೆಳವಣಿಗೆಯು ಶೇ 2ರ ಆಸುಪಾಸಿನಲ್ಲಿ ಇರಲಿದೆ. 2021ರಲ್ಲಿ ಶೇ 8ರಷ್ಟು ಬೆಳವಣಿಗೆ ಸಾಧ್ಯವಾಗಲಿದೆ ಎಂದಿದ್ದಾರೆ.

ADVERTISEMENT

ಕೊರೊನಾ ಸಾಂಕ್ರಾಮಿಕದ ಅಪಾಯವು ಚೀನಾದಲ್ಲಿ ಇನ್ನೂ ಇದೆ. ಜತೆಗೆ ಬಾಹ್ಯವಾಗಿ ಇತರೆ ದೇಶಗಳೊಂದಿಗಿನ ಆರ್ಥಿಕ ಸಂಬಂಧ ಸರಿ ಇಲ್ಲದೇ ಇರುವುದೂ ತೊಡಕಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.