ADVERTISEMENT

6 ಕೋಟಿ ಐಟಿಆರ್‌ ಸಲ್ಲಿಕೆ: ಆದಾಯ ತೆರಿಗೆ ಇಲಾಖೆ

ಪಿಟಿಐ
Published 13 ಸೆಪ್ಟೆಂಬರ್ 2025, 15:15 IST
Last Updated 13 ಸೆಪ್ಟೆಂಬರ್ 2025, 15:15 IST
   

ನವದೆಹಲಿ: 2025–26ರ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ 6 ಕೋಟಿಗೂ ಅಧಿಕ ಆದಾಯ ತೆರಿಗೆ ವಿವರಗಳು (ಐಟಿಆರ್‌) ಸಲ್ಲಿಕೆಯಾಗಿವೆ ಎಂದು ಆದಾಯ ತೆರಿಗೆ ಇಲಾಖೆ ಶನಿವಾರ ‘ಎಕ್ಸ್‌’ನಲ್ಲಿ ತಿಳಿಸಿದೆ.

ದಂಡ ಇಲ್ಲದೆ ಐಟಿಆರ್‌ ಸಲ್ಲಿಕೆಗೆ ಸೆಪ್ಟೆಂಬರ್‌ 15 ಕೊನೆಯ ದಿನ. ತೆರಿಗೆ ಪಾವತಿದಾರರು ಮತ್ತು ತೆರಿಗೆ ವೃತ್ತಿಪರರು 6 ಕೋಟಿ ಐಟಿಆರ್‌ ಸಲ್ಲಿಕೆ ಆಗಲು ಸಹಾಯ ಮಾಡಿದ್ದಾರೆ. ಇನ್ನೂ ಐಟಿಆರ್ ಸಲ್ಲಿಕೆಯಾಗುತ್ತಿವೆ ಎಂದು ಇಲಾಖೆ ತಿಳಿಸಿದೆ.

ಐಟಿಆರ್‌ ಸಲ್ಲಿಸುವ ತೆರಿಗೆ ಪಾವತಿದಾರರಿಗೆ ನೆರವು ಮತ್ತು ಸಂಬಂಧಿತ ಸೇವೆ ನೀಡಲು ಇಲಾಖೆಯ ಸಹಾಯವಾಣಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿರುತ್ತದೆ. ಜೊತೆಗೆ ಇಲಾಖೆಯು ದೂರವಾಣಿ ಕರೆ, ವೆಬ್‌ ಸೆಷನ್‌, ಲೈವ್ ಚಾಟ್‌ ಮೂಲಕ ನೆರವು ನೀಡಲಿದೆ ಎಂದು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.