ADVERTISEMENT

ಐ.ಟಿ. ಇಲಾಖೆಯಿಂದ 25 ಸಾವಿರ ಜನರಿಗೆ ಸಂದೇಶ

ಪಿಟಿಐ
Published 27 ನವೆಂಬರ್ 2025, 16:17 IST
Last Updated 27 ನವೆಂಬರ್ 2025, 16:17 IST
ಆದಾಯ ತೆರಿಗೆ ಇಲಾಖೆ
ಆದಾಯ ತೆರಿಗೆ ಇಲಾಖೆ   

ನವದೆಹಲಿ: 2025–26ನೇ ಮೌಲ್ಯಮಾಪನ ವರ್ಷದ ಆದಾಯ ತೆರಿಗೆ ವಿವರ ಸಲ್ಲಿಸುವಾಗ ವಿದೇಶಗಳಲ್ಲಿನ ಆಸ್ತಿಯ ಬಗ್ಗೆ ಮಾಹಿತಿ ನೀಡದ ಸುಮಾರು 25 ಸಾವಿರ ಮಂದಿಗೆ ಎಸ್‌ಎಂಎಸ್‌ ಹಾಗೂ ಇ–ಮೇಲ್‌ ಕಳುಹಿಸುವ ಕೆಲಸವನ್ನು ಆದಾಯ ತೆರಿಗೆ ಇಲಾಖೆಯು ಶುರುಮಾಡಲಿದೆ.

ವಿದೇಶಗಳಿಂದ ಪಡೆದಿರುವ ಮಾಹಿತಿ ಆಧರಿಸಿ ಇಷ್ಟು ಮಂದಿಯನ್ನು ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಅಭಿಯಾನದ ಭಾಗವಾಗಿ ಕೇಂದ್ರ ನೇರ ತೆರಿಗೆಗಳ ಮಂಡಳಿಯು (ಸಿಬಿಡಿಟಿ) ಮೊದಲ ಹಂತದಲ್ಲಿ 25 ಸಾವಿರ ಮಂದಿಗೆ ಸಂದೇಶ ರವಾನಿಸಿ, ಅವರಿಗೆ ಪರಿಷ್ಕೃತ ಐ.ಟಿ. ವಿವರ ಸಲ್ಲಿಸುವಂತೆ ತಿಳಿಸಲಿದೆ. ಡಿಸೆಂಬರ್‌ 31ಕ್ಕೆ ಮೊದಲು ಪರಿಷ್ಕೃತ ವಿವರ ಸಲ್ಲಿಸದಿದ್ದರೆ ದಂಡ ಪಾವತಿಸಬೇಕಾಗುತ್ತದೆ.

ADVERTISEMENT

ಕಪ್ಪು ಹಣ ಕಾಯ್ದೆಯ ಅನ್ವಯ, ವಿದೇಶಗಳಲ್ಲಿನ ಆಸ್ತಿಯ ಬಗ್ಗೆ ಮಾಹಿತಿ ನೀಡದೆ ಇದ್ದರೆ ₹10 ಲಕ್ಷದವರೆಗೆ ದಂಡ ವಿಧಿಸಲು ಅವಕಾಶ ಇದೆ. ಅಲ್ಲದೆ, ಶೇ 30ರಷ್ಟು ತೆರಿಗೆ ಹಾಗೂ ತೆರಿಗೆ ಮೊತ್ತದ ಮೇಲೆ ಶೇ 300ರಷ್ಟು ದಂಡ ವಿಧಿಸಲು ಕೂಡ ಅವಕಾಶ ಇದೆ.

ಕಳೆದ ವರ್ಷ ಕೂಡ ಇಲಾಖೆಯು ಇದೇ ಬಗೆಯಲ್ಲಿ ಸಂದೇಶ ರವಾನಿಸಿತ್ತು. ಇದಾದ ನಂತರ 24,678 ಮಂದಿ ತೆರಿಗೆ ಪಾವತಿದಾರರು ತಮ್ಮ ವಿವರದ ಮರುಪರಿಶೀಲನೆ ನಡೆಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.