ನವದೆಹಲಿ: ಆದಾಯ ತೆರಿಗೆ ವಿವರ ಸಲ್ಲಿಸಲು ಸೋಮವಾರ (ಸೆಪ್ಟೆಂಬರ್ 15) ಕಡೆಯ ದಿನವಾಗಿದ್ದು, ಗಡುವು ವಿಸ್ತರಣೆ ಇಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ವಿವರ ಸಲ್ಲಿಸಲು ಇರುವ ಪೋರ್ಟಲ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಎಂದು ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ದೂರಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಇಲಾಖೆ, ಪೋರ್ಟಲ್ ಸರಿಯಾಗಿಯೇ ಕೆಲಸ ಮಾಡುತ್ತಿದೆ. ಐ.ಟಿ ವಿವರ ಸಲ್ಲಿಸುವ ದಿನಾಂಕ ವಿಸ್ತರಣೆ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ, ಸುಳ್ಳು ಸುದ್ದಿಗಳನ್ನು ನಂಬದಿರಿ ಎಂದು ತಿಳಿಸಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ‘ಐ.ಟಿ ವಿವರ ಸಲ್ಲಿಕೆ ದಿನಾಂಕವನ್ನು ಸೆ.30ರವರೆಗೆ ವಿಸ್ತರಿಸಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ, ಇದು ಸುಳ್ಳು. ವಿವರ ಸಲ್ಲಿಕೆಗೆ ಸೆ.15 ಕೊನೆಯ ದಿನಾಂಕವಾಗಿದೆ. ತೆರಿಗೆ ಪಾವತಿ ಸೇರಿದಂತೆ ಇತರ ಮಾಹಿತಿಗಾಗಿ ನಮ್ಮ ಸಹಾಯವಾಣಿ ದಿನದ 24 ಗಂಟೆಯವರೆಗೂ ಕಾರ್ಯನಿರ್ವಹಿಸುತ್ತದೆ’ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.