ಬೆಂಗಳೂರು: ಆದಾಯ ತೆರಿಗೆ ವಿವರ ಸಲ್ಲಿಸಲು ಸೋಮವಾರ (ಸೆಪ್ಟೆಂಬರ್ 15) ಕಡೆಯ ದಿನ. ಕಡೆಯ ದಿನದ ನಂತರ ಐ.ಟಿ ವಿವರ ಸಲ್ಲಿಸುವವರು ದಂಡ ಪಾವತಿ ಮಾಡಬೇಕಾಗುತ್ತದೆ.
ಆದರೆ ವಿವರ ಸಲ್ಲಿಸಲು ಇರುವ ಪೋರ್ಟಲ್ ಭಾನುವಾರ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಎಂದು ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ದೂರಿದ್ದಾರೆ. ಭಾನುವಾರ ರಾತ್ರಿಯ ವೇಳೆಗೆ ಈ ವಿಚಾರವಾಗಿ ಎಕ್ಸ್ ವೇದಿಕೆಯಲ್ಲಿ ಎರಡೂವರೆ ಸಾವಿರಕ್ಕೂ ಹೆಚ್ಚು ಪೋಸ್ಟ್‌ಗಳು ಬಂದಿದ್ದವು.
ಐ.ಟಿ. ವಿವರ ಸಲ್ಲಿಸಲು ಇರುವ ಕಡೆಯ ದಿನಾಂಕವನ್ನು ವಿಸ್ತರಿಸಬೇಕು ಎಂದು ಹಲವರು ಆದಾಯ ತೆರಿಗೆ ಇಲಾಖೆ ಹಾಗೂ ಕೇಂದ್ರ ಹಣಕಾಸು ಸಚಿವಾಲಯವನ್ನು ಎಕ್ಸ್ ಮೂಲಕ ಕೋರಿದ್ದಾರೆ.
ಚಲನ್ ಪಾವತಿ ಸರಿಯಾಗಿ ಆಗುತ್ತಿಲ್ಲ, ಪೋರ್ಟಲ್‌ಗೆ ಲಾಗಿನ್ ಆಗುವಲ್ಲಿ ಸಮಸ್ಯೆಗಳು ಎದುರಾಗುತ್ತಿವೆ ಎಂದು ಹಲವರು ಅಳಲು ತೋಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.