
ಅಡುಗೆ ಎಣ್ಣೆ
ನವದೆಹಲಿ: ‘ಪ್ರಸಕ್ತ ತೈಲ ಮಾರುಕಟ್ಟೆ ವರ್ಷದಲ್ಲಿ ದೇಶದಲ್ಲಿ 96 ಲಕ್ಷ ಟನ್‌ನಷ್ಟು ಅಡುಗೆ ಎಣ್ಣೆ ಉತ್ಪಾದನೆ ಆಗುವ ಅಂದಾಜಿದೆ’ ಎಂದು ಭಾರತದ ಅಡುಗೆ ಎಣ್ಣೆ ತಯಾರಕರ ಸಂಘದ (ಐವಿಪಿಎ) ಅಧ್ಯಕ್ಷ ಸುಧಾಕರ್ ದೇಸಾಯಿ ಹೇಳಿದ್ದಾರೆ.
ಇದೇ ಅವಧಿಯಲ್ಲಿ ದೇಶದಲ್ಲಿನ ಗ್ರಾಹಕರ ಬೇಡಿಕೆಯನ್ನು ಪೂರೈಸಲು 1.67 ಕೋಟಿ ಟನ್ ಅಡುಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಅಡುಗೆ ಎಣ್ಣೆ ಮಾರುಕಟ್ಟೆ ವರ್ಷವು ಅಕ್ಟೋಬರ್‌ನಿಂದ ಸೆಪ್ಟೆಂಬರ್‌ವರೆಗೆ ಇರುತ್ತದೆ. ಭಾರತವು ತನ್ನ ಒಟ್ಟು ಅಡುಗೆ ಎಣ್ಣೆ ಬಳಕೆಯಲ್ಲಿ ಶೇ 40ರಷ್ಟನ್ನು ಮಾತ್ರ ದೇಶಿ ಉತ್ಪಾದನೆಯಿಂದ ಪೂರೈಸಿಕೊಳ್ಳುತ್ತದೆ. ಉಳಿದಿದ್ದನ್ನು ಆಮದು ಮಾಡಿಕೊಳ್ಳುತ್ತದೆ.
ಭಾರತೀಯ ಎಣ್ಣೆ ಗಿರಣಿ ಮಾಲೀಕರ ಸಂಘದ (ಎಸ್‌ಇಎ) ಪ್ರಕಾರ, 2024–25ರ ತೈಲ ಮಾರುಕಟ್ಟೆ ವರ್ಷದಲ್ಲಿ 1.6 ಕೋಟಿ ಟನ್ ಅಡುಗೆ ಎಣ್ಣೆ ಆಮದು ಆಗಿತ್ತು. ಹಣಕಾಸಿನ ಮೌಲ್ಯದಲ್ಲಿ ಇದು ₹1.61 ಲಕ್ಷ ಕೋಟಿ ಆಗುತ್ತದೆ.
2025–26ರ ತೈಲ ಮಾರುಕಟ್ಟೆ ವರ್ಷದಲ್ಲಿ 85 ಲಕ್ಷ ಟನ್ ತಾಳೆ ಎಣ್ಣೆ, 55 ಲಕ್ಷ ಸೋಯಾ ಎಣ್ಣೆ, 30 ಲಕ್ಷ ಟನ್ ಸೂರ್ಯಕಾಂತಿ ಎಣ್ಣೆ ಮತ್ತು 2 ಲಕ್ಷ ಟನ್‌ನಷ್ಟು ಇತರೆ ಎಣ್ಣೆ ಆಮದಾಗುವ ನಿರೀಕ್ಷೆ ಇದೆ ಎಂದು ದೇಸಾಯಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.