ADVERTISEMENT

ದೇಶದಲ್ಲಿ ವಿದ್ಯುತ್‌ ಬಳಕೆ ಇಳಿಕೆ: ಕೇಂದ್ರ ಸರ್ಕಾರ

ಪಿಟಿಐ
Published 1 ಡಿಸೆಂಬರ್ 2025, 15:14 IST
Last Updated 1 ಡಿಸೆಂಬರ್ 2025, 15:14 IST
   

ನವದೆಹಲಿ: ದೇಶದಲ್ಲಿ ನವೆಂಬರ್‌ ತಿಂಗಳಿನಲ್ಲಿ 12,340 ಕೋಟಿ ಯೂನಿಟ್‌ನಷ್ಟು ವಿದ್ಯುತ್‌ ಬಳಕೆ ಆಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ 12,379 ಕೋಟಿ ಯೂನಿಟ್‌ನಷ್ಟು ವಿದ್ಯುತ್‌ ಬಳಕೆ ಆಗಿತ್ತು. ಇದಕ್ಕೆ ಹೋಲಿಸಿದರೆ ವಿದ್ಯುತ್‌ ಬಳಕೆ ಪ್ರಮಾಣವು ಶೇ 0.31ರಷ್ಟು ಕಡಿಮೆ ಆಗಿದೆ. 

ದೇಶದ ಕೆಲವು ಭಾಗಗಳಲ್ಲಿ ಸುರಿದ ಅಕಾಲಿಕ ಮಳೆ ಮತ್ತು ಚಳಿಗಾಲದ ಆರಂಭದಿಂದಾಗಿ ತಾಪಮಾನ ನಿಯಂತ್ರಣದಲ್ಲಿತ್ತು. ಇದರಿಂದ ಹವಾ ನಿಯಂತ್ರಕಗಳು, ಕೂಲರ್ಸ್‌ಗಳ ಬಳಕೆಯಲ್ಲಿ ಕಡಿಮೆ ಆಗಿದ್ದರಿಂದ, ದೇಶದಲ್ಲಿ ವಿದ್ಯುತ್‌ ಬಳಕೆ ಇಳಿದಿದೆ ಎಂದು ವಲಯದ ತಜ್ಞರು ಹೇಳಿದ್ದಾರೆ.

ADVERTISEMENT

ನವೆಂಬರ್‌ನಲ್ಲಿ ಗರಿಷ್ಠ ವಿದ್ಯುತ್‌ ಬೇಡಿಕೆ 215.54 ಗಿಗಾವಾಟ್‌ ಆಗಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ 207.44 ಗಿಗಾವಾಟ್‌ ವಿದ್ಯುತ್ ಬೇಡಿಕೆ ಇತ್ತು. 2024ರ ಮೇ ತಿಂಗಳಲ್ಲಿ ವಿದ್ಯುತ್‌ ಬೇಡಿಕೆಯು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 250 ಗಿಗಾವಾಟ್‌ಗೆ ತಲುಪಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.