ADVERTISEMENT

ನಿಷೇಧದ ಬಳಿಕವೂ 18 ಲಕ್ಷ ಟನ್ ಗೋಧಿ ರಫ್ತು: ಭಾರತ

ಪಿಟಿಐ
Published 26 ಜೂನ್ 2022, 11:18 IST
Last Updated 26 ಜೂನ್ 2022, 11:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಬೆಲೆ ಏರಿಕೆ ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ಮೇ 13ರಂದು ಗೋಧಿ ರಫ್ತನ್ನು ನಿಷೇಧಿಸಿತ್ತು. ಆದಾಗ್ಯೂ, ಆ ಬಳಿಕ ಇಲ್ಲಿಯವರೆಗೆ 18 ಲಕ್ಷ ಟನ್ ಗೋಧಿ ರಫ್ತು ಮಾಡಲಾಗಿದೆ.

ಈ ಕುರಿತು ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಮಾಹಿತಿ ನೀಡಿದ್ದಾರೆ.

‘ಜಾಗತಿಕ ಆಹಾರ ಭದ್ರತೆಗಾಗಿ ಒಗ್ಗೂಡುವಿಕೆ’ ಎಂಬ ವಿಷಯದಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಸಚಿವರ ಸಮಾವೇಶದಲ್ಲಿ ಅವರು ಮಾತನಾಡಿದರು.

ADVERTISEMENT

ಮಾನವೀಯತೆಯ ಆಧಾರದಲ್ಲಿ ಅಫ್ಗಾನಿಸ್ತಾನಕ್ಕೆ 50,000 ಟನ್ ಗೋಧಿ ಕಳುಹಿಸಿಕೊಡಲು ನಿರ್ಧರಿಸಲಾಗಿತ್ತು. ಈ ಪೈಕಿ 33,000 ಟನ್ ಗೋಧಿಯನ್ನು ಈಗಾಗಲೇ ಕಳುಹಿಸಿಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

‘138 ಕೋಟಿ ಜನರನ್ನು ಪೋಷಿಸಬೇಕಾದ ಮಹತ್ವದ ಜವಾಬ್ದಾರಿ ನಡುವೆಯೂ ಭಾರತವು ಸದಾ ಜಾಗತಿಕ ಅಗತ್ಯತೆಗಳನ್ನು ಗಣನೆಗೆ ತೆಗೆದುಕೊಂಡಿದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.