ADVERTISEMENT

ದೋಹಾ ಮತ್ತು ದುಬೈಗೆ 1.5 ಟನ್‌ ಲಿಚಿ ಹಣ್ಣು ರಫ್ತು

ಪಿಟಿಐ
Published 27 ಜೂನ್ 2025, 14:38 IST
Last Updated 27 ಜೂನ್ 2025, 14:38 IST
ಲಿಚಿ
ಲಿಚಿ   

ನವದೆಹಲಿ: ಪಂಜಾಬ್‌ನಿಂದ ದೋಹಾ ಮತ್ತು ದುಬೈಗೆ 1.5 ಟನ್‌ ಲಿಚಿ ಹಣ್ಣನ್ನು ರಫ್ತು ಮಾಡಲಾಗಿದೆ ಎಂದು ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ಶುಕ್ರವಾರ ತಿಳಿಸಿದೆ.

ಪಂಜಾಬ್‌ನ ಪಠಾಣ್‌ಕೋಟ್‌ನಿಂದ ಜೂನ್‌ 23ರಂದು ದೋಹಾಗೆ 1 ಟನ್ ಮತ್ತು ದುಬೈಗೆ 0.5 ಟನ್‌ ಲಿಚಿ ಹಣ್ಣನ್ನು ರಫ್ತು ಮಾಡಲಾಗಿದೆ ಎಂದು ತಿಳಿಸಿದೆ. 

2023–24ರಲ್ಲಿ 71,490 ಟನ್‌ನಷ್ಟು ಲಿಚಿ ಹಣ್ಣು ಪಂಜಾಬ್‌ನಲ್ಲಿ ಉತ್ಪಾದನೆಯಾಗಿತ್ತು. ಇದು ದೇಶದ ಒಟ್ಟು ಉತ್ಪಾದನೆಯ ಪೈಕಿ ಶೇ 12.39ರಷ್ಟು ಪಾಲನ್ನು ಹೊಂದಿದೆ. ಇದೇ ಅವಧಿಯಲ್ಲಿ ದೇಶದಿಂದ 639 ಟನ್‌ ಲಿಚಿ ಹಣ್ಣನ್ನು ರಫ್ತು ಮಾಡಲಾಗಿತ್ತು.

ADVERTISEMENT

ಹಣ್ಣು ಮತ್ತು ತರಕಾರಿಗಳ ರಫ್ತಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಹಲವಾರು ಕ್ರಮ ತೆಗೆದುಕೊಳ್ಳುತ್ತಿದೆ. 2024–25ರ ಆರ್ಥಿಕ ವರ್ಷದಲ್ಲಿ ಹಣ್ಣು ಮತ್ತು ತರಕಾರಿಗಳ ರಫ್ತಿನಲ್ಲಿ ಶೇ 5.67ರಷ್ಟು ಏರಿಕೆಯಾಗಿದ್ದು, ₹33,076 ಕೋಟಿಯಷ್ಟಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.