ADVERTISEMENT

ದಾಖಲೆ ಮಟ್ಟಕ್ಕೆ ರಫ್ತು ವಹಿವಾಟು

ಪಿಟಿಐ
Published 3 ಏಪ್ರಿಲ್ 2022, 16:00 IST
Last Updated 3 ಏಪ್ರಿಲ್ 2022, 16:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ರಫ್ತು ವಹಿವಾಟು 2021–22ನೇ ಹಣಕಾಸು ವರ್ಷದಲ್ಲಿ ದಾಖಲೆಯ ₹ 31.76 ಲಕ್ಷ ಕೋಟಿಗಳಿಗೆ ಏರಿಕೆ ಆಗಿದೆ. ಕೇಂದ್ರ ಸರ್ಕಾರವು ಭಾನುವಾರ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಈ ಅಂಶ ಇದೆ.

2020–21ನೇ ಹಣಕಾಸು ವರ್ಷದಲ್ಲಿ ₹ 22.19 ಲಕ್ಷ ಕೋಟಿ ಮೌಲ್ಯದ ರಫ್ತು ವಹಿವಾಟು ನಡೆದಿತ್ತು. ಪೆಟ್ರೋಲಿಯಂ ಉತ್ಪನ್ನಗಳು, ಎಂಜಿನಿಯರಿಂಗ್‌ ಸರಕುಗಳು, ರತ್ನ ಮತ್ತು ಚಿನ್ನಾಭರಣ ಹಾಗೂ ರಾಸಾಯನಿಕ ಉತ್ಪನ್ನಗಳ ರಫ್ತು ಹೆಚ್ಚಾಗಿರುವುದರಿಂದ ರಫ್ತು ವಹಿವಾಟು ದಾಖಲೆ ಮಟ್ಟವನ್ನು ತಲುಪಿದೆ.

2022ರ ಮಾರ್ಚ್‌ನಲ್ಲಿ ರಫ್ತು ವಹಿವಾಟು ಸಾರ್ವಕಾಲಿಕ ದಾಖಲೆ ಮಟ್ಟವಾದ ₹ 3.04 ಲಕ್ಷ ಕೋಟಿಗೆ ಏರಿಕೆ ಆಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್‌ ತಿಳಿಸಿದ್ಧಾರೆ. 2021ರ ಮಾರ್ಚ್‌ನಲ್ಲಿ ₹ 2.58 ಲಕ್ಷ ಕೋಟಿ ಮೌಲ್ಯದ ರಫ್ತು ವಹಿವಾಟು ನಡೆದಿತ್ತು.

ADVERTISEMENT

ಅಮೆರಿಕ, ಯುಎಇ, ಚೀನಾ, ಬಾಂಗ್ಲಾದೇಶ ಮತ್ತು ನೆದರ್ಲೆಂಡ್ಸ್‌ ದೇಶಗಳು ಭಾರತದ ಪ್ರಮುಖ ಐದು ರಫ್ತು ತಾಣಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.