
ಪಿಟಿಐ
ನವದೆಹಲಿ: ಜುಲೈ-ಸೆಪ್ಟೆಂಬರ್‌ನ ತ್ರೈಮಾಸಿಕದಲ್ಲಿ ಭಾರತದ ನಿವ್ವಳ ಆಂತರಿಕ ಉತ್ಪನ್ನವು(ಜಿಡಿಪಿ) ಶೇ 8.2ಕ್ಕೆ ಹೆಚ್ಚಳವಾಗಿದೆ. ಜಿಎಸ್‌ಟಿ ದರ ಕಡಿತದಿಂದ ಬಳಕೆ ಹೆಚ್ಚಳದ ನಿರೀಕ್ಷೆಯಲ್ಲಿ ಕಾರ್ಖಾನೆಗಳು ಹೆಚ್ಚಿನ ಉತ್ಪನ್ನಗಳನ್ನು ಮಾಡಿದ್ದರಿಂದ ಈ ಬೆಳವಣಿಗೆ ಕಂಡುಬಂದಿದೆ. ಇದು ಕಳೆದ ಆರು ತ್ರೈಮಾಸಿಕಗಳಿಗಿಂತ ಗರಿಷ್ಠ ಬೆಳವಣಿಗೆಯಾಗಿದೆ.
ಈ ವರ್ಷದ 2ನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಹಿಂದಿನ ಮೂರು ತಿಂಗಳ ಶೇ 7.8ಕ್ಕಿಂತ ಮತ್ತು ಹಿಂದಿನ ವರ್ಷದ ಶೇ 5.6ಕ್ಕಿಂತ ಉತ್ತಮವಾಗಿದೆ.
ದೇಶದ ಒಟ್ಟು ದೇಶೀಯ ಉತ್ಪನ್ನದ ಶೇ14 ರಷ್ಟಿರುವ ಉತ್ಪಾದನೆಯು ಎರಡನೇ ತ್ರೈಮಾಸಿಕದಲ್ಲಿ ಶೇ 9.1 ರಷ್ಟು ಏರಿಕೆಯಾಗಿದ್ದು, ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಶೇ 2.2 ರಷ್ಟು ಏರಿಕೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.