ನವದೆಹಲಿ: ಅಮೆರಿಕಕ್ಕೆ ರವಾನೆ ಆಗುವ ಸ್ಮಾರ್ಟ್‌ಫೋನ್‌ಗಳ ಅತಿದೊಡ್ಡ ತಯಾರಿಕಾ ಕೇಂದ್ರ ಎಂಬ ಹೆಸರನ್ನು ಭಾರತವು ಚೀನಾದಿಂದ ಕಿತ್ತುಕೊಂಡಿದೆ. 2025ರ ಎರಡನೆಯ ತ್ರೈಮಾಸಿಕದಲ್ಲಿ ಈ ಬದಲಾವಣೆ ಆಗಿದೆ.
ತೆರಿಗೆ ಸಂಬಂಧಿತ ಮಾತುಕತೆಗಳು ನಡೆಯುತ್ತಿರುವ ಹೊತ್ತಿನಲ್ಲಿ ಚೀನಾದಿಂದ ಅಮೆರಿಕಕ್ಕೆ ರವಾನೆ ಆಗುವ ಸ್ಮಾರ್ಟ್‌ಫೋನ್‌ಗಳ ಸಂಖ್ಯೆ ಕಡಿಮೆ ಆಗಿದೆ ಎಂದು ಕ್ಯಾನಲಿಸ್ ಸಂಸ್ಥೆ ನಡೆಸಿರುವ ವಿಶ್ಲೇಷಣೆಯು ಹೇಳಿದೆ.
ಅಮೆರಿಕ ಮತ್ತು ಚೀನಾ ನಡುವೆ ಸುಂಕದ ವಿಚಾರವಾಗಿ ನಡೆಯುತ್ತಿರುವ ಮಾತುಕತೆಗಳಿಂದ ಯಾವ ಫಲಿತಾಂಶ ಬರಲಿದೆ ಎಂಬುದು ಖಚಿತವಾಗಿಲ್ಲದ ಕಾರಣಕ್ಕೆ, ಪೂರೈಕೆ ವ್ಯವಸ್ಥೆಯಲ್ಲಿ ಬದಲಾವಣೆಗಳು ಕಂಡುಬಂದಿವೆ ಎಂದು ಸಂಸ್ಥೆಯು ಹೇಳಿದೆ.
ಅಮೆರಿಕವು ಆಮದು ಮಾಡಿಕೊಂಡಿರುವ ಒಟ್ಟು ಸ್ಮಾರ್ಟ್‌ಫೋನ್‌ಗಳಲ್ಲಿ ಚೀನಾದಲ್ಲಿ ಜೋಡಿಸಲಾದ ಸ್ಮಾರ್ಟ್‌ಫೋನ್‌ಗಳ ಪ್ರಮಾಣವು ಏಪ್ರಿಲ್–ಜೂನ್ ಅವಧಿಯಲ್ಲಿ ಶೇ 25ಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ಭಾರತದಲ್ಲಿ ತಯಾರಾದ ಸ್ಮಾರ್ಟ್‌ಫೋನ್‌ಗಳ ಪ್ರಮಾಣವು ಶೇ 44ಕ್ಕೆ ಹೆಚ್ಚಳ ಆಗಿದೆ ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.