ADVERTISEMENT

ಅಕ್ಟೋಬರ್‌ನಲ್ಲಿ ಬೆಳವಣಿಗೆ ಕಂಡ ತಯಾರಿಕಾ ಚಟುವಟಿಕೆ

ಪಿಟಿಐ
Published 1 ನವೆಂಬರ್ 2022, 16:00 IST
Last Updated 1 ನವೆಂಬರ್ 2022, 16:00 IST
   

ನವದೆಹಲಿ (ಪಿಟಿಐ): ಅಕ್ಟೋಬರ್‌ನಲ್ಲಿ ದೇಶದ ತಯಾರಿಕಾ ಚಟುವಟಿಕೆಗಳು ಬಲಿಷ್ಠವಾಗಿ ನಡೆದಿವೆ. ಈ ತಿಂಗಳಲ್ಲಿ ಉತ್ಪಾದನೆಯು ಹೆಚ್ಚಳ ಕಂಡಿದೆ.

ತಯಾರಿಕಾ ಚಟುವಟಿಕೆಗಳ ಮಟ್ಟವನ್ನು ಸೂಚಿಸುವ ಎಸ್‌ಆ್ಯಂಡ್‌ಪಿ ಗ್ಲೋಬಲ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (ಪಿಎಂಐ) ಸೆಪ್ಟೆಂಬರ್‌ನಲ್ಲಿ 55.1ರಷ್ಟು ಇದ್ದಿದ್ದು ಅಕ್ಟೋಬರ್‌ನಲ್ಲಿ 55.3ಕ್ಕೆ ಹೆಚ್ಚಳ ಕಂಡಿದೆ.

ಇದು ಸತತ 16ನೆಯ ತಿಂಗಳಿನಲ್ಲಿ ದೇಶದಲ್ಲಿ ತಯಾರಿಕಾ ಚಟುವಟಿಕೆಗಳಿಗೆ ವಾತಾವರಣ ಸುಧಾರಣೆ ಆಗಿದ್ದನ್ನು ಸೂಚಿಸುತ್ತಿದೆ. ಪಿಎಂಐ 50ಕ್ಕಿಂತ ಹೆಚ್ಚಿದ್ದರೆ ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.