ನವದೆಹಲಿ: ರಷ್ಯಾದಿಂದ ಭಾರತವು ಪ್ರತಿ ನಿತ್ಯ ಖರೀದಿಸುವ ಕಚ್ಚಾ ತೈಲದ ಪ್ರಮಾಣವು ಆಗಸ್ಟ್ ತಿಂಗಳ ಮೊದಲಾರ್ಧದಲ್ಲಿ 20 ಲಕ್ಷ ಬ್ಯಾರೆಲ್‌ಗೆ ಏರಿಕೆಯಾಗಿದೆ ಎಂದು ಜಾಗತಿಕ ವ್ಯಾಪಾರ ವಿಶ್ಲೇಷಕ ಸಂಸ್ಥೆ ಕೆಪ್ಲೆರ್ ತಿಳಿಸಿದೆ.
ಪ್ರಸಕ್ತ ತಿಂಗಳ ಮೊದಲಾರ್ಧದಲ್ಲಿ ದಿನಕ್ಕೆ ಅಂದಾಜು 52 ಲಕ್ಷ ಬ್ಯಾರೆಲ್ ಕಚ್ಚಾ ತೈಲವು ದೇಶಕ್ಕೆ ಆಮದಾಗಿದೆ. ಈ ಪೈಕಿ ಶೇ 38ರಷ್ಟು ರಷ್ಯಾದಿಂದ ಬಂದಿದೆ. ತೈಲ ಸಂಸ್ಕರಣಾ ಕಂಪನಿಗಳು ಆರ್ಥಿಕ ಅಂಶಗಳಿಗೆ ನಿರಂತರವಾಗಿ ಆದ್ಯತೆ ನೀಡುತ್ತಿದ್ದಾರೆ. ಇದು ತೈಲ ಆಮದು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ.
ಜುಲೈ ತಿಂಗಳಿನಲ್ಲಿ ರಷ್ಯಾದಿಂದ ಪ್ರತಿ ನಿತ್ಯ 16 ಲಕ್ಷ ಬ್ಯಾರೆಲ್ ತೈಲ ಆಮದಾಗಿತ್ತು. ಇದು ಆಗಸ್ಟ್‌ನಲ್ಲಿ 20 ಲಕ್ಷ ಬ್ಯಾರೆಲ್‌ಗೆ ಹೆಚ್ಚಳವಾಗಿದೆ. ಇರಾಕ್, ಸೌದಿ ಅರೇಬಿಯಾದಿಂದ ಆಮದು ಕಡಿಮೆಯಾಗಿದೆ ಎಂದು ತಿಳಿಸಿದೆ.
‘ಆಗಸ್ಟ್ ತಿಂಗಳಿಗೆ ಬೇಕಾದ ದಾಸ್ತಾನಿಗೆ ಜೂನ್ ಮತ್ತು ಜುಲೈನಲ್ಲಿ ಬೇಡಿಕೆ ಸಲ್ಲಿಸಲಾಗಿರುತ್ತದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸುಂಕ ನಿರ್ಧಾರದ ಪರಿಣಾಮವು ಸೆಪ್ಟೆಂಬರ್ ನಂತರ ಇರಲಿದೆ’ ಎಂದು ಕೆಪ್ಲೆರ್‌ನ ಸಂಶೋಧನಾ ವಿಶ್ಲೇಷಕ (ಸಂಸ್ಕರಣೆ ಮತ್ತು ಮಾಡೆಲಿಂಗ್) ಸುಮಿತ್ ರಿಟೋಲಿಯಾ ಹೇಳಿದ್ದಾರೆ.
Highlights - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.