ADVERTISEMENT

ಭಾರತ ಎಸ್‌ಎಎಫ್‌ ರಫ್ತು ಕೇಂದ್ರ ಆಗುವ ನಿರೀಕ್ಷೆ: ಸಮೀರ್ ಸಿನ್ಹಾ

ಪಿಟಿಐ
Published 14 ಡಿಸೆಂಬರ್ 2025, 13:50 IST
Last Updated 14 ಡಿಸೆಂಬರ್ 2025, 13:50 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ‘ಭಾರತವು ಸುಸ್ಥಿರ ವಿಮಾನ ಇಂಧನ (ಎಸ್‌ಎಎಫ್‌) ರಫ್ತು ಮಾಡುವ ಜಾಗತಿಕ ಕೇಂದ್ರ ಆಗಬಹುದು’ ಎಂದು ತ್ರಿವೇಣಿ ಎಂಜಿನಿಯರಿಂಗ್‌ ಆ್ಯಂಡ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಸಿಇಒ (ಸಕ್ಕರೆ ವ್ಯವಹಾರ) ಸಮೀರ್ ಸಿನ್ಹಾ ಹೇಳಿದ್ದಾರೆ.

ದೇಶವು, ಎಸ್‌ಎಎಫ್ ರಫ್ತು ಕೇಂದ್ರವಾಗಿ ತನ್ನನ್ನು ತಾನು ಗುರುತಿಸಿಕೊಳ್ಳುತ್ತಿದೆ. ಬ್ರೆಜಿಲ್‌ನಂತಹ ಪ್ರತಿಸ್ಪರ್ಧಿ ದೇಶಗಳಿಗೆ ಹೋಲಿಸಿದರೆ ಭಾರತವು ಹೆಚ್ಚುವರಿ ಎಥೆನಾಲ್ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ.

2029ರ ವೇಳೆಗೆ ಸುಸ್ಥಿರ ವಿಮಾನ ಇಂಧನ ಘಟಕ ಕಾರ್ಯಾರಂಭ ಮಾಡಬಹುದು ಎಂದು ತಿಳಿಸಿದ್ದಾರೆ.

ADVERTISEMENT

ಸುಸ್ಥಿರ ವಿಮಾನ ಇಂಧನದ ರಫ್ತು ಕೇಂದ್ರವಾಗಿ ಹೊರಹೊಮ್ಮಲು ಭಾರತವು ಹೆಚ್ಚಿನ ಸಾಮರ್ಥ್ಯ ಹೊಂದಿದೆ. ಭಾರತದಲ್ಲಿ ಬೆಳೆದ ಕಬ್ಬಿನಿಂದ ಪಡೆದ ಎಥೆನಾಲ್, ಬ್ರೆಜಿಲ್‌ ದೇಶದ ಎಥೆನಾಲ್‌ಗಿಂತ ಕಡಿಮೆ ಇಂಗಾಲದ ತೀವ್ರತೆಯನ್ನು ಹೊಂದಿದೆ. ಬ್ರೆಜಿಲ್‌ನ ಎಥೆನಾಲ್‌ಗಿಂತ ಭಾರತದ ಎಥೆನಾಲ್ ಅನ್ನು ಬಳಸಿದರೆ ವಾಯುಮಾಲಿನ್ಯ ಇಳಿಕೆಯು ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.