
Corporate Business, Indian, Office - Group of Customer Service Executives Attending Calls at a Busy Call Centre Fashion Designer
ನವದೆಹಲಿ: ದೇಶದ ಸೇವಾ ವಲಯದ ಚಟುವಟಿಕೆಗಳು ಡಿಸೆಂಬರ್‌ನಲ್ಲಿ ತುಸು ಮಂದವಾಗಿವೆ. ಈ ತಿಂಗಳಲ್ಲಿ ಕಂಪನಿಗಳು ಹೊಸಬರನ್ನು ನೇಮಕ ಮಾಡಿಕೊಳ್ಳಲು ಹಿಂದೇಟು ಹಾಕಿವೆ.
ಎಚ್‌ಎಸ್‌ಬಿಸಿ ಇಂಡಿಯಾ ಸರ್ವಿಸಸ್ ಪಿಎಂಐ ಬ್ಯುಸಿನೆಸ್ ಆ್ಯಕ್ಟಿವಿಟಿ ಇಂಡೆಕ್ಸ್ ಡಿಸೆಂಬರ್‌ನಲ್ಲಿ 58ಕ್ಕೆ ಇಳಿಕೆಯಾಗಿದೆ. ಇದು ನವೆಂಬರ್‌ನಲ್ಲಿ 59.8ರ ಮಟ್ಟದಲ್ಲಿತ್ತು. ಡಿಸೆಂಬರ್‌ನಲ್ಲಿ ದಾಖಲಾಗಿರುವುದು ಜನವರಿ ನಂತರದ ಅತ್ಯಂತ ಕಡಿಮೆ ಬೆಳವಣಿಗೆ ದರ.
ಪರ್ಚೇಸಿಂಗ್ ಮ್ಯಾನೇಜರ್ಸ್ ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿದ್ದರೆ ಅದನ್ನು ಬೆಳವಣಿಗೆ ಎಂದು, 50ಕ್ಕಿಂತ ಕೆಳಕ್ಕೆ ಬಂದರೆ ಅದನ್ನು ಕುಸಿತ ಎಂದು ಪರಿಗಣಿಸಲಾಗುತ್ತದೆ.
‘ಡಿಸೆಂಬರ್‌ನಲ್ಲಿ ದೇಶದ ಸೇವಾ ವಲಯವು ಬೆಳವಣಿಗೆ ಕಂಡಿದೆ. ಆದರೆ ಸಮೀಕ್ಷೆಯ ಹಲವು ಸೂಚಕಗಳಲ್ಲಿನ ಇಳಿಕೆಯು ಬೆಳವಣಿಗೆ ಪ್ರಮಾಣ ತಗ್ಗುತ್ತಿರುವುದನ್ನು ಸೂಚಿಸುತ್ತಿರಬಹುದು’ ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್‌ನ ಅರ್ಥಶಾಸ್ತ್ರದ ಸಹ ನಿರ್ದೇಶಕಿ ಪಾಲಿಯಾನಾ ಡಿ ಲಿಮಾ ಹೇಳಿದ್ದಾರೆ.
ತಯಾರಿಕಾ ವಲಯ ಹಾಗೂ ಸೇವಾ ವಲಯದ ಏರಿಳಿತವನ್ನು ದಾಖಲಿಸುವ ಎಚ್‌ಎಸ್‌ಬಿಸಿ ಇಂಡಿಯಾ ಕಾಂಪೊಸಿಟ್ ಪಿಎಂಐ ಔಟ್‌ಪುಟ್ ಸೂಚ್ಯಂಕವು ಡಿಸೆಂಬರ್‌ನಲ್ಲಿ 57.8ಕ್ಕೆ ಇಳಿಕೆಯಾಗಿದೆ. ಇದು ಡಿಸೆಂಬರ್‌ನಲ್ಲಿ 59.7ರ ಮಟ್ಟದಲ್ಲಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.