ADVERTISEMENT

ಭಾರತದ ಜವಳಿ ಉತ್ಪನ್ನಗಳಿಗೆ ಅಮೆರಿಕದಲ್ಲಿ ಶೂನ್ಯ ಸುಂಕ: ಪೀಯೂಷ್ ಗೋಯಲ್

ಪಿಟಿಐ
Published 12 ಫೆಬ್ರುವರಿ 2026, 15:52 IST
Last Updated 12 ಫೆಬ್ರುವರಿ 2026, 15:52 IST
<div class="paragraphs"><p>ಪೀಯೂಷ್ ಗೋಯಲ್</p></div>

ಪೀಯೂಷ್ ಗೋಯಲ್

   

ನವದೆಹಲಿ: ‘ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಭಾರತಕ್ಕೆ, ಬಾಂಗ್ಲಾದೇಶದ ಜವಳಿ ಉತ್ಪನ್ನಗಳಿಗೆ ಸಿಕ್ಕಂತಹ ಪ್ರಯೋಜನವೇ ಸಿಗಲಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.

ಅಮೆರಿಕವು, ಬಾಂಗ್ಲಾದೇಶದ ಸರಕುಗಳ ಮೇಲಿನ ಪ್ರತಿಸುಂಕವನ್ನು ಶೇ 19ಕ್ಕೆ ಇಳಿಸಲಿದೆ. ಆದರೆ, ಅಮೆರಿಕದ ಹತ್ತಿ ಬಳಸಿ, ಯಂತ್ರಗಳ ನೆರವಿಲ್ಲದೆ ಸಿದ್ಧಪಡಿಸಿದ ನೂಲಿನಿಂದ ತಯಾರಿಸಿದ ಜವಳಿ ಉತ್ಪನ್ನಗಳಿಗೆ ಮಾತ್ರ ಶೂನ್ಯ ಸುಂಕ ವಿಧಿಸಲಿದೆ. ಈಗ ಬಾಂಗ್ಲಾದೇಶದ ಜವಳಿ ಉತ್ಪನ್ನಕ್ಕೆ ಅಮೆರಿಕದಲ್ಲಿ ಶೇ 31ರಷ್ಟು ಸುಂಕ (ಅತ್ಯಂತ ನೆಚ್ಚಿನ ರಾಷ್ಟ್ರವೆಂಬ ಕಾರಣಕ್ಕೆ ಶೇ 12ರಷ್ಟು ಸುಂಕ ಮತ್ತು ಪ್ರತಿಸುಂಕದ ರೂಪದಲ್ಲಿ ಶೇ 19ರಷ್ಟು ಸುಂಕ) ಇದೆ. ಬಾಂಗ್ಲಾದೇಶವು ಅಮೆರಿಕದ ನೂಲು ಬಳಸಿದರೆ ಸುಂಕವು ಶೇ 12ಕ್ಕೆ ಇಳಿಕೆ ಆಗಲಿದೆ.

ADVERTISEMENT

ಅಮೆರಿಕ–ಭಾರತದ ಅಂತಿಮ ವ್ಯಾಪಾರ ಒಪ್ಪಂದದಲ್ಲಿ ಬಾಂಗ್ಲಾದೇಶವು ಪಡೆದ ಪ್ರಯೋಜನವನ್ನೇ ಭಾರತವು ಸಹ ಪಡೆಯಲಿದೆ ಎಂದು ಗೋಯಲ್ ಹೇಳಿದ್ದಾರೆ.

ಭಾರತದ ಕಂಪನಿಗಳು ಅಮೆರಿಕದಿಂದ ನೂಲು ಮತ್ತು ಹತ್ತಿಯನ್ನು ಖರೀದಿಸಿ, ಉತ್ಪನ್ನಗಳನ್ನು ತಯಾರಿಸಿ ಅಮೆರಿಕಕ್ಕೆ ರಫ್ತು ಮಾಡಿದರೆ, ಅಮೆರಿಕದಲ್ಲಿ ಶೂನ್ಯ ಸುಂಕದ ಪ್ರಯೋಜನ ದೊರೆಯಲಿದೆ ಎಂದು ಹೇಳಿದ್ದಾರೆ.

ಇದು ದೇಶದ ಹತ್ತಿ ಬೆಳೆಗಾರರ ಮೇಲೆ ಯಾವುದೇ ಪರಿಣಾಮ ಬೀರದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.