ADVERTISEMENT

ಭಾರತ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆ: ರಫ್ತು ಹೆಚ್ಚಳದ ಅಗತ್ಯವಿದೆ ಎಂದ ಗಡ್ಕರಿ

ಪಿಟಿಐ
Published 7 ಜನವರಿ 2026, 16:31 IST
Last Updated 7 ಜನವರಿ 2026, 16:31 IST
<div class="paragraphs"><p>ನಿತಿನ್ ಗಡ್ಕರಿ</p></div>

ನಿತಿನ್ ಗಡ್ಕರಿ

   

ನವದೆಹಲಿ: ‘ಭಾರತವು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆ ಆಗಬೇಕಾದರೆ ಆಮದನ್ನು ಕಡಿಮೆ ಮಾಡಿ, ರಫ್ತು ಪ್ರಮಾಣವನ್ನು ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ರಸ್ತೆ ನಿರ್ಮಾಣದಲ್ಲಿ ಪೆಟ್ರೋಲಿಯಂ ಮುಕ್ತ ವಸ್ತುವಾದ ಜೈವಿಕ ಡಾಂಬರು (ಬಯೊ ಬಿಟುಮೆನ್‌) ಬಳಸುವುದರಿಂದ ವಿಕಸಿತ ಭಾರತ ಗುರಿ ಸಾಧನೆಗೆ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ. ದೇಶದ ಕಚ್ಚಾ ತೈಲ ಆಮದು ಕಡಿಮೆ ಮಾಡುವಲ್ಲಿ ಕೃಷಿ ತ್ಯಾಜ್ಯ ಹೇಗೆ ನೆರವಾಗುತ್ತಿದೆ ಎಂದು ಇಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.

ADVERTISEMENT

ಜಗತ್ತಿನಲ್ಲಿ ಮೊದಲ ಬಾರಿಗೆ ಜೈವಿಕ ಡಾಂಬರನ್ನು ವಾಣಿಜ್ಯ ಉದ್ದೇಶಕ್ಕೆ ತಯಾರಿಸಿದ್ದು ಭಾರತ. ಇದು ರೈತರನ್ನು ಸಬಲೀಕರಿಸುತ್ತಿದೆ, ಗ್ರಾಮೀಣ ಭಾಗದಲ್ಲಿ ಜೀವನೋಪಾಯವನ್ನು ಸೃಷ್ಟಿಸಿದೆ ಮತ್ತು ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡಿದೆ ಎಂದು ತಿಳಿಸಿದ್ದಾರೆ.

ಕೃಷಿ ತ್ಯಾಜ್ಯವನ್ನು ಬಳಸಿಕೊಳ್ಳುವ ಮೂಲಕ, ಬೆಳೆ ಸುಡುವುದರಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.