ADVERTISEMENT

ಮುಂದಿನ ವರ್ಷದಿಂದ ಶೇ 20ರಷ್ಟು ಎಥೆನಾಲ್ ಇರುವ ಪೆಟ್ರೋಲ್: ಕೇಂದ್ರ

ಪಿಟಿಐ
Published 10 ಆಗಸ್ಟ್ 2022, 16:32 IST
Last Updated 10 ಆಗಸ್ಟ್ 2022, 16:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಾಣಿಪತ್ (ಹರಿಯಾಣ): ಪೆಟ್ರೋಲ್‌ನಲ್ಲಿ ಶೇಕಡ 20ರಷ್ಟು ಎಥೆನಾಲ್ ಬೆರೆಸಿ ಮುಂದಿನ ವರ್ಷದ ಏಪ್ರಿಲ್‌ನಿಂದ ಆಯ್ದ ಪೆಟ್ರೋಲ್‌ ಬಂಕ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಕೇಂದ್ರ ತೈಲ ಸಚಿವ ಹರದೀಪ್ ‍ಪುರಿ ಹೇಳಿದ್ದಾರೆ.

ದೇಶದಲ್ಲಿ ಈಗ ಪೆಟ್ರೋಲ್‌ಗೆ ಶೇಕಡ 10ರಷ್ಟು ಎಥೆನಾಲ್ ಬೆರೆಸಲಾಗುತ್ತಿದೆ. ಶೇ 20ರಷ್ಟು ಎಥೆನಾಲ್ ಮಿಶ್ರಣವಿರುವ ಪೆಟ್ರೋಲ್ ‍‍ಪೂರೈಕೆಯನ್ನು 2025ರೊಳಗೆ ಮಾಡುವ ಗುರಿ ಹೊಂದಲಾಗಿದೆ.

ಶೇ 10ರಷ್ಟು ಎಥೆನಾಲ್ ಬೆರೆಸುತ್ತಿರುವ ಕಾರಣ ₹ 41 ಸಾವಿರ ಕೋಟಿ ವಿದೇಶಿ ವಿನಿಮಯ ಉಳಿತಾಯವಾಗುತ್ತಿದೆ ಎಂದು ಪುರಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.