ADVERTISEMENT

ಅಮೆರಿಕದಿಂದ 22 ಲಕ್ಷ ಟನ್‌ ಎಲ್‌ಪಿಜಿ ಖರೀದಿಗೆ ಒಪ್ಪಂದ: ಕೇಂದ್ರ ಸರ್ಕಾರ

ಪಿಟಿಐ
Published 17 ನವೆಂಬರ್ 2025, 13:46 IST
Last Updated 17 ನವೆಂಬರ್ 2025, 13:46 IST
<div class="paragraphs"><p>ಹರದೀಪ್‌ ಸಿಂಗ್ ಪುರಿ</p></div>

ಹರದೀಪ್‌ ಸಿಂಗ್ ಪುರಿ

   

ನವದೆಹಲಿ: ದೇಶದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು, 2026ರಲ್ಲಿ ಅಮೆರಿಕದಿಂದ 22 ಲಕ್ಷ ಟನ್‌ ಎಲ್‌ಪಿಜಿ ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿವೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.

ಇದು ಒಂದು ವರ್ಷದ ಅವಧಿಯ ಒಪ್ಪಂದವಾಗಿದೆ. ಅಮೆರಿಕದ ಕಂಪನಿಗಳು ಈ ಎಲ್‌ಪಿಜಿಯನ್ನು ಸರಬರಾಜು ಮಾಡಲಿವೆ. ಇದು ಭಾರತದ ಒಟ್ಟು ವಾರ್ಷಿಕ ಆಮದಿನ ಶೇ 10ರಷ್ಟಾಗಿದೆ ಎಂದು ತಿಳಿಸಿದೆ.

ADVERTISEMENT

‘ಅಮೆರಿಕದಿಂದ ಭಾರತವು ವಾರ್ಷಿಕ 22 ಲಕ್ಷ ಟನ್ ಎಲ್‌ಪಿಜಿ ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ’ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರದೀಪ್‌ ಸಿಂಗ್ ಪುರಿ ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

ಇದು ಅಮೆರಿಕದೊಂದಿಗೆ ಮಾಡಿಕೊಂಡ ಐತಿಹಾಸಿಕ ಒಪ್ಪಂದವಾಗಿದೆ. ಈ ಪೂರೈಕೆಯಿಂದ ದೇಶದಲ್ಲಿ ಗೃಹ ಬಳಕೆಯ ಎಲ್‌ಪಿಜಿ ಲಭ್ಯತೆ ಹೆಚ್ಚಲಿದೆ ಎಂದು ತಿಳಿಸಿದ್ದಾರೆ. 

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಒಪ್ಪಂದ ಮಾಡಿಕೊಂಡಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.