ADVERTISEMENT

India US Trade Deal | ವ್ಯಾಪಾರ ಮಾತುಕತೆ: ಅಮೆರಿಕಕ್ಕೆ ಭಾರತದ ತಂಡ ಭೇಟಿ

ಪಿಟಿಐ
Published 13 ಅಕ್ಟೋಬರ್ 2025, 13:43 IST
Last Updated 13 ಅಕ್ಟೋಬರ್ 2025, 13:43 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ವ್ಯಾಪಾರ ಒಪ್ಪಂದ ಕುರಿತ ಮಾತುಕತೆಗಾಗಿ ಭಾರತದ ಹಿರಿಯ ಅಧಿಕಾರಿಗಳ ತಂಡವು ಅಮೆರಿಕಕ್ಕೆ ಇದೇ ವಾರ ಭೇಟಿ ನೀಡಲಿದೆ.

ಉಭಯ ದೇಶಗಳ ನಾಯಕರು ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಸುವಂತೆ ಅಧಿಕಾರಿಗಳಿಗೆ ಈ ವರ್ಷದ ಫೆಬ್ರುವರಿಯಲ್ಲಿ ನಿರ್ದೇಶನ ನೀಡಿದ್ದರು.

ಅಕ್ಟೋಬರ್‌–ನವೆಂಬರ್‌ ವೇಳೆಗೆ ಒಪ್ಪಂದದ ಮೊದಲ ಹಂತದ ಮಾತುಕತೆ ಮುಕ್ತಾಯಗೊಳಿಸುವ ಆಲೋಚನೆ ಅಧಿಕಾರಿಗಳಿಗೆ ಇದೆ.

ADVERTISEMENT

ಇದುವರೆಗೆ ಐದು ಸುತ್ತಿನ ಮಾತುಕತೆಗಳು ನಡೆದಿವೆ. ಈ ವಾರದಲ್ಲಿ ಭಾರತದ ತಂಡವು ಅಮೆರಿಕಕ್ಕೆ ಭೇಟಿ ನೀಡಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್‌ ನೇತೃತ್ವದ ಅಧಿಕಾರಿಗಳ ನಿಯೋಗ ವ್ಯಾಪಾರ ಒಪ್ಪಂದದ ಮಾತುಕತೆಗಾಗಿ ನ್ಯೂಯಾರ್ಕ್‌ಗೆ ಕಳೆದ ತಿಂಗಳು ಭೇಟಿ ನೀಡಿತ್ತು.

ಈಗ ಭಾರತದಿಂದ ಆಮದಾಗುವ ಸರಕುಗಳ ಮೇಲೆ ಅಮೆರಿಕವು ಶೇ 50ರಷ್ಟು ಸುಂಕ ವಿಧಿಸುತ್ತಿದೆ. ಇಂಥ ಸಂದರ್ಭದಲ್ಲಿ, ಈ ಮಾತುಕತೆ ಮುಖ್ಯವಾಗಿದೆ ಎನ್ನಲಾಗಿದೆ. 

ಈಗ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಮೌಲ್ಯ ₹16.93 ಲಕ್ಷ ಕೋಟಿಯಾಗಿದೆ. 2030ರ ವೇಳೆಗೆ ಇದನ್ನು ₹44.33 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿಯನ್ನು ಒಪ್ಪಂದವು ಹೊಂದಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.