ADVERTISEMENT

2020–21ರಲ್ಲಿ ಜಿಡಿಪಿ ಶೇ (–)6.6ರಷ್ಟು ಇಳಿಕೆ

ಪಿಟಿಐ
Published 31 ಜನವರಿ 2022, 16:39 IST
Last Updated 31 ಜನವರಿ 2022, 16:39 IST
ಜಿಡಿಪಿ
ಜಿಡಿಪಿ   

ನವದೆಹಲಿ: ದೇಶದ ಜಿಡಿಪಿಯು 2020–21ನೇ ಹಣಕಾಸು ವರ್ಷದಲ್ಲಿ ಶೇಕಡ (–)6.6ರಷ್ಟು ಕುಸಿತ ಕಂಡಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ (ಎನ್‌ಎಸ್‌ಒ) ಸೋಮವಾರ ಮಾಹಿತಿ ನೀಡಿದೆ.

2021ರ ಮೇ ತಿಂಗಳಿನಲ್ಲಿ ತಾತ್ಕಾಲಿಕ ಅಂದಾಜು ಬಿಡುಗಡೆ ಮಾಡಿದ್ದಾಗ ಜಿಡಿಪಿಯು ಶೇ (–)7.3ರಷ್ಟು ಕುಸಿತ ಕಂಡಿದೆ ಎಂದು ಹೇಳಲಾಗಿತ್ತು.

ಆರ್ಥಿಕತೆಯ ಮೇಲೆ ಕೋವಿಡ್‌ ಸಾಂಕ್ರಾಮಿಕದ ಪರಿಣಾಮವುಆರಂಭದಲ್ಲಿ ಅಂದುಕೊಂಡಷ್ಟು ತೀವ್ರವಾಗಿ ಇಲ್ಲ ಎನ್ನುವುದನ್ನು ಇದು ಸೂಚಿಸುತ್ತದೆ ಎಂದು ಎನ್‌ಎಸ್‌ಒ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.