ADVERTISEMENT

ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿ ಸಕಾರಾತ್ಮಕ ಹಾದಿಗೆ

ಪಿಟಿಐ
Published 2 ಡಿಸೆಂಬರ್ 2020, 19:50 IST
Last Updated 2 ಡಿಸೆಂಬರ್ 2020, 19:50 IST

ನವದೆಹಲಿ: ‘ಭಾರತದ ಆರ್ಥಿಕತೆಯು ಕೋವಿಡ್‌–19 ಸಾಂಕ್ರಾಮಿಕದ ಪರಿಣಾಮಗಳಿಂದ ಹೊರಬರುತ್ತಿದ್ದು, ನಾಲ್ಕನೇ ತ್ರೈಮಾಸಿಕದಲ್ಲಿ ಸಕಾರಾತ್ಮಕ ಹಾದಿಗೆ ಮರಳಲಿದೆ’ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಸಾಂಕ್ರಾಮಿಕದಿಂದ ಇಳಿಮುಖವಾಗಿದ್ದ ಜಿಡಿಪಿ ಬೆಳವಣಿಗೆಯು ಮತ್ತೆ ಚೇತರಿಸಿಕೊಳ್ಳುತ್ತಿದೆ ಎನ್ನುವುದನ್ನು ಎರಡನೇ ತ್ರೈಮಾಸಿಕದ ಅಂಕಿ–ಅಂಶಗಳು ಸೂಚಿಸಿವೆ. ಮೂರನೇ ತ್ರೈಮಾಸಿಕದ ಆರ್ಥಿಕ ಚಟುವಟಿಕೆಗಳು ಹಿಂದಿನ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದ ಮಟ್ಟದಲ್ಲಿಯೇ ಇರುವ ನಿರೀಕ್ಷೆ ಇದೆ. ನಾಲ್ಕನೇ ತ್ರೈಮಾಸಿಕದಲ್ಲಿ ಸಣ್ಣ ಮಟ್ಟದ ಸಕಾರಾತ್ಮಕ ಪ್ರಗತಿ ಕಾಣಲಿದೆ’ ಎಂದು ಹೇಳಿದ್ದಾರೆ.

‘ಕೇಂದ್ರ ಸರ್ಕಾರವು ಹಲವು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿದೆ. ಇನ್ನೂ ಕೆಲವು ಜಾರಿಯ ಹಂತದಲ್ಲಿವೆ. ಇದರಿಂದಾಗಿ 2021–22 ಮತ್ತು ಅದರಾಚೆಗೆ ಉತ್ತಮ ಬೆಳವಣಿಗೆ ಸಾಧ್ಯವಾಗಲಿದೆ. ಕೋವಿಡ್‌ ಪರಿಣಾಮಗಳಿಂದ ನಾವು ಹೊರಬರುತ್ತಿದ್ದು, ಮುಂಬರುವ ವರ್ಷಗಳಲ್ಲಿ ಸುಸ್ಥಿರ ಹಾಗೂ ಗರಿಷ್ಠ ಮಟ್ಟದ ಪ್ರಗತಿಯತ್ತ ಸಾಗಲಿದ್ದೇವೆ’ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.