ADVERTISEMENT

ಎಂಜಿನಿಯರಿಂಗ್‌ ಸರಕುಗಳ ರಫ್ತು ಹೆಚ್ಚಳ

ಚೀನಾ, ಇಟಲಿ, ಸಿಂಗಾಪುರ, ಇಂಡೋನೇಷ್ಯಾದಲ್ಲಿ ಸರಕುಗಳ ಸಾಗಣೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 15:29 IST
Last Updated 28 ನವೆಂಬರ್ 2023, 15:29 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕೊಲ್ಕತ್ತ : ಪ್ರಮುಖ 18 ಮಾರುಕಟ್ಟೆಗಳಿಗೆ ದೇಶದ ಎಂಜಿನಿಯರಿಂಗ್‌ ಸರಕುಗಳ ರಫ್ತು ಅಕ್ಟೋಬರ್‌ನಲ್ಲಿ ಸಕಾರಾತ್ಮಕ ಬೆಳವಣಿಗೆ ದಾಖಲಿಸಿದೆ ಎಂದು ಎಂಜಿನಿಯರಿಂಗ್ ರಫ್ತು ಉತ್ತೇಜನ ಮಂಡಳಿ (ಇಇಪಿಸಿ) ಮಂಗಳವಾರ ತಿಳಿಸಿದೆ.

ಬ್ರಿಟನ್‌, ಅಮೆರಿಕ ಮತ್ತು ಯುನೈಟೆಡ್‌ ಅರಬ್‌ ಎಮಿರಯಟ್ಸ್‌ (ಯುಎಇ) ಸೇರಿದಂತೆ ಇತರೆ ರಾಷ್ಟ್ರಗಳಲ್ಲಿ ಸರಕುಗಳ ರಫ್ತು ಬೆಳವಣಿಗೆ ಸಕಾರಾತ್ಮಕತೆ ದಾಖಲಿಸಿದೆ. ಆದರೆ, ಚೀನಾ, ಇಟಲಿ, ಸಿಂಗಪುರ ಮತ್ತು ಇಂಡೊನೇಷ್ಯಾಕ್ಕೆ ಎಂಜಿನಿಯರಿಂಗ್‌ ರಫ್ತು ಇಳಿಕೆ ಕಂಡಿವೆ. 

ಅಮೆರಿಕಕ್ಕೆ ಎಂಜಿನಿಯರಿಂಗ್‌ ಸರಕುಗಳ ರಫ್ತು ಶೇ 2.2ರವರೆಗೆ ಹೆಚ್ಚಾಗಿ ₹11,585 ಕೋಟಿಗೆ ತಲುಪಿದೆ. ಹಿಂದಿನ ಇದೇ ಅವಧಿಯಲ್ಲಿ ₹11,335 ಲಕ್ಷ ಕೋಟಿ ಇತ್ತು. ಅಕ್ಟೋಬರ್‌ನಲ್ಲಿ ಜರ್ಮನಿಗೆ ರಫ್ತು ಪ್ರಮಾಣ ಶೇ 20ರಷ್ಟು ಹೆಚ್ಚಾಗಿ ₹2,856 ಕೋಟಿಗೆ ತಲುಪಿದೆ. ಯುಎಇಗೆ ಎಂಜಿನಿಯರಿಂಗ್‌ ಸರಕುಗಳ ರಫ್ತು ಶೇ 2.9ರಷ್ಟು ಏರಿಕೆಯಾಗಿ ₹2,905 ಕೋಟಿಗೆ ತಲುಪಿದೆ ಎಂದು ತಿಳಿಸಿದೆ.

ADVERTISEMENT

ಒಟ್ಟು ಎಂಜಿನಿಯರಿಂಗ್‌ ಸರಕುಗಳ ರಫ್ತು ಅಕ್ಟೋಬರ್‌ನಲ್ಲಿ ಶೇ 7.2ರಷ್ಟು ಹೆಚ್ಚಾಗಿ, ₹67,427  ಕೋಟಿಗೆ ತಲುಪಿದೆ. ಹಿಂದಿನ ಇದೇ ಅವಧಿಯಲ್ಲಿ ₹62,927 ಕೋಟಿ ಆಗಿತ್ತು.‌

ಮಂಡಳಿಯ ಭಾರತದ ಅಧ್ಯಕ್ಷ ಅರುಣ್‌ ಕುಮಾರ್‌ ಗರೋಡಿಯಾ ಮಾತನಾಡಿ, ಕಬ್ಬಿಣ,ಉಕ್ಕು, ಅಲ್ಯುಮಿನಿಯಂ ಮತ್ತು ಜಿಂಕ್‌ ಉತ್ಪನ್ನಗಳ ರಫ್ತು ಅಕ್ಟೋಬರ್‌ನಲ್ಲಿ ಇಳಿಕೆ ಕಂಡಿದೆ ಎಂದರು. ಯುರೋಪ್ ಒಕ್ಕೂಟದಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಬೇಡಿಕೆ ಕಡಿಮೆ ಆಗಿರುವುದರಿಂದ ರಫ್ತು ಪ್ರಮಾಣ ಇಳಿಕೆ ಆಗಿದೆ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.