ADVERTISEMENT

2030 ವೇಳೆ ಇವಿ ಮಾರುಕಟ್ಟೆ ಗಾತ್ರ ₹20 ಲಕ್ಷ ಕೋಟಿಗೆ; 5 ಕೋಟಿ ಉದ್ಯೋಗ: ಗಡ್ಕರಿ

ಪಿಟಿಐ
Published 19 ಡಿಸೆಂಬರ್ 2024, 11:00 IST
Last Updated 19 ಡಿಸೆಂಬರ್ 2024, 11:00 IST
<div class="paragraphs"><p>ನಿತಿನ್‌ ಗಡ್ಕರಿ</p></div>

ನಿತಿನ್‌ ಗಡ್ಕರಿ

   

ನವದೆಹಲಿ: 2030ರ ವೇಳೆಗೆ ಭಾರತದ ಎಲೆಕ್ಟ್ರಿಕ್‌ ವಾಹನಗಳ ಮಾರುಕಟ್ಟೆ ಗಾತ್ರವು ₹20 ಲಕ್ಷ ಕೋಟಿಗೆ ತಲುಪುವ ಸಾಧ್ಯತೆಯಿದ್ದು, 5 ಕೋಟಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

8ನೇ ಇವೆಕ್ಸ್‌ಪೋ 2024 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 2030ರ ವೇಳೆಗೆ ಎಲೆಕ್ಟ್ರಿಕ್‌ ವಾಹನಗಳ ಹಣಕಾಸು ಮಾರುಕಟ್ಟೆ ಗಾತ್ರ ₹4 ಲಕ್ಷ ಕೋಟಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ ಎಂದರು. 

ADVERTISEMENT

ಸಾರಿಗೆಯಿಂದಲೇ ದೇಶದಲ್ಲಿ ಶೇ 40ರಷ್ಟು ಮಾಲಿನ್ಯ ಉಂಟಾಗುತ್ತಿದೆ. ಸದ್ಯ ನಾವು 22 ಲಕ್ಷ ಕೋಟಿ ಮೌಲ್ಯದ ನವೀಕರಿಸಲಾಗದ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ, ಇದು ದೊಡ್ಡ ಆರ್ಥಿಕ ಸವಾಲಾಗಿದೆ. ಈ ರೀತಿ ನವೀಕರಿಸಲಾಗದ ಇಂಧನ ಆಮದು ಮಾಡಿಕೊಳ್ಳುವುದು ನಮ್ಮ ದೇಶದಲ್ಲಿ ದೊಡ್ಡ ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ಸರ್ಕಾರವು ಜಲಶಕ್ತಿ, ಸೌರ ಶಕ್ತಿ ಮತ್ತು ಹಸಿರು ತ್ಯಾಜ್ಯದಿಂದ ಉತ್ಪಾದಿಸಿದ ಇಂಧನಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದೆ. ಸೌರ ಶಕ್ತಿ ಈಗ ನಮ್ಮೆಲ್ಲರಿಗೂ ಇರುವ ದೊಡ್ಡ ಇಂಧನ ಮೂಲವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.