ADVERTISEMENT

ಆಧಾರ್‌ ಒಟಿಪಿ ಬಳಸಿ ಬ್ಯಾಂಕ್‌ ಖಾತೆ ತೆರೆಯಲು ಅವಕಾಶ

ಪಿಟಿಐ
Published 18 ಫೆಬ್ರುವರಿ 2025, 12:58 IST
Last Updated 18 ಫೆಬ್ರುವರಿ 2025, 12:58 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಚೆನ್ನೈ: ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನಿಂದ (ಐಒಬಿ) ಗ್ರಾಹಕರಿಗೆ ಆಧಾರ್‌ ಒಟಿಪಿ ಮೂಲಕ ಉಳಿತಾಯ ಖಾತೆ ತೆರೆಯುವ ಸೌಲಭ್ಯ ಕಲ್ಪಿಸಲಾಗಿದೆ. 

ಕಾರ್ಪೊರೇಟ್‌ ವಲಯದ ಗ್ರಾಹಕರ ಅನುಕೂಲಕ್ಕಾಗಿ ಎಪಿಐ (ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್‌ಫೇಸ್) ಸೌಲಭ್ಯಕ್ಕೆ ಚಾಲನೆ ನೀಡಲಾಗಿದೆ. ಬ್ಯಾಂಕ್‌ 89ನೇ ಸಂಸ್ಥಾಪನಾ ದಿನಾಚರಣೆಯ ಸಂಭ್ರಮದಲ್ಲಿದೆ. ಇದರ ಬೆನ್ನಲ್ಲೇ ಗ್ರಾಹಕರಿಗೆ ಹಲವು ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಜಯ್ ಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ.

ಗ್ರಾಹಕರು ಬ್ಯಾಂಕ್‌ನ ವೆಬ್‌ಸೈಟ್‌ಗೆ ತೆರಳಿ ಆಧಾರ್‌ ಸಂಖ್ಯೆ ನಮೂದಿಸಬೇಕು. ಬಳಿಕ ಆಧಾರ್‌ ಕಾರ್ಡ್‌ನಲ್ಲಿ ನೋಂದಾಯಿಸಿರುವ ಮೊಬೈಲ್‌ ಸಂಖ್ಯೆಗೆ ಒಟಿಪಿ ಬರಲಿದೆ. ಇದನ್ನು ಬಳಸಿ ಖಾತೆ ತೆರೆಯಬಹುದಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಆಧಾರ್‌ ಒಟಿಪಿ ಆಧರಿತ ಇ–ಕೆವೈಸಿ ಮಾರ್ಗಸೂಚಿಗಳ ಅನ್ವಯ ಈ ಸೌಲಭ್ಯ ಕಲ್ಪಿಸಲಾಗಿದೆ. ಯಾವುದೇ ತೊಂದರೆ ಇಲ್ಲದೆ ಗ್ರಾಹಕರು ಖಾತೆ ತೆರೆಯಬಹುದಾಗಿದೆ. ಇದಕ್ಕೆ ಹೆಚ್ಚಿನ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಸಕಾಲದಲ್ಲಿ ಕಾರ್ಪೊರೇಟ್‌ ವಲಯದ ಗ್ರಾಹಕರು ನೇರವಾಗಿ ತಮ್ಮ ಖಾತೆಗಳಿಂದ ಇತರೆ ಬ್ಯಾಂಕ್‌ ಖಾತೆಗಳಿಗೆ ಸುಲಭವಾಗಿ ಹಣ ವರ್ಗಾಯಿಸಲು ಎಪಿಐ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.