ADVERTISEMENT

ಐಪಿಒ: ಹಿಂದೆ ಸರಿದ ಫ್ಯಾಬ್‌ ಇಂಡಿಯಾ

ರಾಯಿಟರ್ಸ್
Published 28 ಫೆಬ್ರುವರಿ 2023, 4:26 IST
Last Updated 28 ಫೆಬ್ರುವರಿ 2023, 4:26 IST
   

ಬೆಂಗಳೂರು : ಫ್ಯಾಬ್‌ ಇಂಡಿಯಾ ಕಂಪನಿಯು ಆರಂಭಿಕ ಸಾರ್ವಜನಿಕ ಹೂಡಿಕೆ (ಐಪಿಒ) ಮೂಲಕ ಷೇರುಗಳನ್ನು ಮಾರಾಟ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದೆ.

ಬಡ್ಡಿದರ ಹೆಚ್ಚಳವು ಷೇರುಮಾರುಕಟ್ಟೆಯಲ್ಲಿ ಒತ್ತಡ ಸೃಷ್ಟಿಸಿರುವುದರಿಂದ ₹ 4 ಸಾವಿರ ಕೋಟಿ ಮೊತ್ತದ ಐಪಿಒ ನಿರ್ಧಾರವನ್ನು ಕೈಬಿಟ್ಟಿರುವುದಾಗಿ ಹೇಳಿದೆ. ಕಂಪನಿಯು ಸಾಂಪ್ರದಾಯಿಕ ಭಾರತೀಯ ಉಡುಗೆಗಳಿಗೆ ಜನಪ್ರಿಯವಾಗಿದೆ. ಭವಿಷ್ಯದಲ್ಲಿ ಐಪಿಒ ಪ್ರಕ್ರಿಯೆ ಕೈಗೊಳ್ಳುವ ಕುರಿತು ಮುಂದೆ ನಿರ್ಧರಿಸುವುದಾಗಿ ಹೇಳಿದೆ.

ಮಾರುಕಟ್ಟೆ ಸ್ಥಿತಿಯು ದುರ್ಬಲವಾಗಿದೆ. ಬಹುತೇಕ ಕಂಪನಿಗಳು ಈಗಿರುವುದಕ್ಕಿಂತಲೂ ಹೆಚ್ಚಿನ ಮೌಲ್ಯ ಇರುವ ಸಂದರ್ಭದಲ್ಲಿ ಬಂಡವಾಳ ಸಂಗ್ರಹಿಸಲು ಆಲೋಚಿಸುತ್ತಿವೆ ಎಂದು ಮೋತಿಲಾಲ್‌ ಓಸ್ವಾಲ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಈಕ್ವಿಟಿ ಮುಖ್ಯಸ್ಥ ಹೇಮಾಂಗ್‌ ಜೈನ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.