ADVERTISEMENT

ಕ್ವಾಲಿಟಿ ಕಂಪನಿ ನಿರ್ದೇಶಕರ ವಿರುದ್ಧ ಪ್ರಕರಣ

ಬ್ಯಾಂಕುಗಳಿಗೆ ₹ 1,400 ಕೋಟಿ ವಂಚನೆ ಆರೋಪ

ಪಿಟಿಐ
Published 22 ಸೆಪ್ಟೆಂಬರ್ 2020, 21:04 IST
Last Updated 22 ಸೆಪ್ಟೆಂಬರ್ 2020, 21:04 IST
ಸಿಬಿಐ ಲಾಂಛನ
ಸಿಬಿಐ ಲಾಂಛನ   

ನವದೆಹಲಿ: ವಿವಿಧ ಬ್ಯಾಂಕುಗಳಿಗೆ ₹ 1,400 ಕೋಟಿಗೂ ಅಧಿಕ ಮೊತ್ತ ವಂಚಿಸಿದ ಆರೋಪದ ಮೇಲೆಐಸ್‌ಕ್ರೀಂ ತಯಾರಿಕಾ ಕಂಪನಿ 'ಕ್ವಾಲಿಟಿ ಲಿಮಿಟೆಡ್‌'ನ ನಿರ್ದೇಶಕರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

ಬ್ಯಾಂಕ್‌ ಆಫ್‌ ಇಂಡಿಯಾ ನೇತೃತ್ವದ ಬ್ಯಾಂಕುಗಳ ಒಕ್ಕೂಟ ದೂರು ನೀಡಿದ್ದು, ಕಂಪನಿಯ ನಿರ್ದೇಶಕರಾದ ಸಂಜಯ್‌ ಧಿಂಗ್ರ, ಸಿದ್ಧಾಂತ್‌ ಗುಪ್ತ ಹಾಗೂ ಅರುಣ್‌ ಶ್ರೀವಾಸ್ತವ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ದೆಹಲಿ, ಸಹರಾನ್‌ಪುರ, ಬುಲಂದ್‌ಶಹರ್‌, ಅಜ್ಮೀರ್‌ ಹಾಗೂ ಪಲ್ವಾಲ್‌ ಸೇರಿದಂತೆ ಎಂಟು ಕಡೆಗಳಲ್ಲಿ ಕಂಪನಿಗೆ ಸೇರಿದ ಕಚೇರಿ, ಕಟ್ಟಡಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿದೆ.

ADVERTISEMENT

ತೆರಿಗೆ ಉಳಿಸಲು ನಡೆಸಿರುವ ವಹಿವಾಟುಗಳು (ಶಾಮ್‌ ಟ್ರ್ಯಾನ್ಸಾಕ್ಷನ್ಸ್), ಬ್ಯಾಂಕ್‌ ಫಂಡ್‌ಗಳನ್ನು ವರ್ಗಾಯಿಸಿರುವುದು, ಖೊಟ್ಟಿ ದಾಖಲೆಗಳು ಮತ್ತು ರಸೀದಿಗಳನ್ನು ಸೃಷ್ಟಿಸಿರುವುದು, ಲೆಕ್ಕಪತ್ರ ಸರಿಯಾಗಿ ನಿರ್ವಹಣೆ ಮಾಡದಿರುವ ಆರೋಪಗಳಡಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ವಕ್ತಾರ ಆರ್‌.ಕೆ.ಗೌರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.