ADVERTISEMENT

ವರ್ತಕ ಸಮುದಾಯದಿಂದ ಪ್ರತಿಭಟನೆ ಸಿದ್ಧತೆ

ರಾಯಿಟರ್ಸ್
Published 18 ಜುಲೈ 2022, 16:32 IST
Last Updated 18 ಜುಲೈ 2022, 16:32 IST

ನವದೆಹಲಿ (ರಾಯಿಟರ್ಸ್/ಪಿಟಿಐ): ಆಹಾರ ಧಾನ್ಯಗಳ ಮೇಲೆ ತೆರಿಗೆ ವಿಧಿಸಿರುವುದನ್ನು ವಿರೋಧಿಸಿ ವರ್ತಕರು ಮುಂದಿನ ವಾರ ದೇಶದಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ ಎಂದು ಅಖಿಲ ಭಾರತ ವರ್ತಕರ ಒಕ್ಕೂಟದ (ಸಿಎಐಟಿ) ಅಧ್ಯಕ್ಷ ಪ್ರವೀಣ್ ಖಂಡೇಲ್ವಾಲ್ ತಿಳಿಸಿದ್ದಾರೆ.

ಒಕ್ಕೂಟವು ಒಂದು ಕೋಟಿಗೂ ಹೆಚ್ಚು ಸದಸ್ಯರನ್ನು ಪ್ರತಿನಿಧಿಸುತ್ತದೆ. ಸರಣಿ ಪ್ರತಿಭಟನಾ ಸಭೆಗಳು ಜುಲೈ 26ರಿಂದ ಭೋಪಾಲ್‌ನಿಂದ ಶುರುವಾಗಲಿವೆ ಎಂದು ಖಂಡೇಲ್ವಾಲ್ ಹೇಳಿದ್ದಾರೆ.

ದೆಹಲಿಯ ವರ್ತಕರ ಸಂಘಟನೆಯಾಗಿರುವ ಸಿಟಿಐ, ಆಹಾರ ಧಾನ್ಯಗಳ ಮೇಲಿನ ಜಿಎಸ್‌ಟಿ ವಿರೋಧಿಸಿ ಬುಧವಾರ ವರ್ತಕರ ಮಹಾಪಂಚಾಯತ್‌ಗೆ ಕರೆ ನೀಡಿದೆ.

ADVERTISEMENT

ಹೊಸ ತೆರಿಗೆಗಳ ವಿರುದ್ಧ ಹೋರಾಟ ಹೇಗಿರಬೇಕು ಎಂಬುದನ್ನು ವರ್ತಕ ಸಮುದಾಯದ ಪ್ರಮುಖರು ತೀರ್ಮಾನಿಸಲಿದ್ದಾರೆ ಎಂದು ಸಿಐಟಿ ಅಧ್ಯಕ್ಷ ಬ್ರಿಜೇಶ್ ಗೋಯಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.