ADVERTISEMENT

ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ₹30,500 ಕೋಟಿ ಹಣ

ಪಿಟಿಐ
Published 17 ಜೂನ್ 2022, 4:07 IST
Last Updated 17 ಜೂನ್ 2022, 4:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ/ಜ್ಯೂರಿಕ್: ಭಾರತದ ವ್ಯಕ್ತಿಗಳು ಮತ್ತು ಸಂಸ್ಥೆಗಳು ಸ್ವಿಸ್‌ ಬ್ಯಾಂಕ್‌ನಲ್ಲಿ ಬೇರೆ ಬೇರೆ ರೂಪದಲ್ಲಿ ಇರಿಸಿರುವ ಮೊತ್ತ 14 ವರ್ಷಗಳ ಗರಿಷ್ಠ ಮಟ್ಟವಾದ ₹ 30,500 ಕೋಟಿಗೆ 2021ರಲ್ಲಿ ತಲುಪಿದೆ ಎಂದು ಸ್ವಿಜರ್ಲೆಂಡ್‌ನ ಕೇಂದ್ರೀಯ ಬ್ಯಾಂಕ್‌ ನೀಡಿರುವ ಅಂಕಿ–ಅಂಶಗಳು ಹೇಳಿವೆ.

2020ರ ಕೊನೆಯಲ್ಲಿ ಭಾರತದ ಗ್ರಾಹಕರು ಸ್ವಿಸ್‌ ಬ್ಯಾಂಕ್‌ಗಳಲ್ಲಿ ಇರಿಸಿದ ಮೊತ್ತವು ₹ 20,700 ಕೋಟಿಯಷ್ಟಿತ್ತು. ಭಾರತೀಯರು ಜಮಾ ಮಾಡಿರುವ ಹಣದ ಮೊತ್ತ ಸತತ ಎರಡು ವರ್ಷಗಳಿಂದ ಹೆಚ್ಚಾಗುತ್ತಿದೆ.

ಭಾರತದ ಗ್ರಾಹಕರ ಉಳಿತಾಯ ಅಥವಾ ಠೇವಣಿ ಖಾತೆಗಳಲ್ಲಿ ಇರುವ ಹಣವು ಏಳು ವರ್ಷಗಳ ಗರಿಷ್ಠ ಮೊತ್ತವಾದ ₹ 4,800 ಕೋಟಿಗೆ ತಲುಪಿದೆ.

ADVERTISEMENT

ಈ ಅಂಕಿ–ಅಂಶಗಳು ಸ್ವಿಜರ್ಲೆಂಡ್‌ನ ಕೇಂದ್ರೀಯ ಬ್ಯಾಂಕ್ ನೀಡಿರುವ ಅಧಿಕೃತ ಅಂಕಿ–ಅಂಶಗಳು. ಭಾರತೀಯರು ಸ್ವಿಜರ್ಲೆಂಡ್‌ನ ಬ್ಯಾಂಕ್‌ಗಳಲ್ಲಿ ಇರಿಸಿದ್ದಾರೆ ಎನ್ನಲಾಗಿರುವ ಕಪ್ಪುಹಣ ಇದರಲ್ಲಿ ಸೇರಿಲ್ಲ. ಭಾರತೀಯರು, ಅನಿವಾಸಿ ಭಾರತೀಯರು ಬೇರೆ ದೇಶಗಳ ಮೂಲಕ ಸ್ವಿಜರ್ಲೆಂಡ್‌ನ ಬ್ಯಾಂಕ್‌ಗಳಲ್ಲಿ ಇರಿಸಿರುವ ಮೊತ್ತವೂ ಇದರಲ್ಲಿ ಸೇರಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.