ADVERTISEMENT

ಸ್ವಿಸ್‌ ಬ್ಯಾಂಕ್‌: ಭಾರತೀಯರು ಇಟ್ಟಿರುವುದು ₹ 20 ಸಾವಿರ ಕೋಟಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 21:09 IST
Last Updated 17 ಜೂನ್ 2021, 21:09 IST
   

ನವದೆಹಲಿ/ಜ್ಯುರಿಕ್ (ಪಿಟಿಐ): ಭಾರತದವರು ಸ್ವಿಸ್‌ ಬ್ಯಾಂಕ್‌ಗಳಲ್ಲಿ ಇರಿಸಿರುವ ಹಣದ ಮೊತ್ತವು 2020ರಲ್ಲಿ ₹ 20,706 ಕೋಟಿಗೆ ಏರಿಕೆ ಕಂಡಿದೆ. ಬೇರೆ ಬೇರೆ ಹಣಕಾಸು ಉತ್ಪನ್ನಗಳ ಮೂಲಕ ಭಾರತದ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಂದ ಸ್ವಿಸ್ ಬ್ಯಾಂಕ್‌ಗಳಲ್ಲಿ ಇಷ್ಟು ಮೊತ್ತವನ್ನು ಇರಿಸಲಾಗಿದೆ. ನೇರವಾಗಿ ಠೇವಣಿ ರೂಪದಲ್ಲಿ ಇರಿಸಿದ ಮೊತ್ತದಲ್ಲಿ ಇಳಿಕೆ ಆಗಿದೆ.

ಇದು 13 ವರ್ಷಗಳಲ್ಲಿನ ಅತಿಹೆಚ್ಚಿನ ಮೊತ್ತ. ಈ ಮೊತ್ತವು ಸ್ವಿಸ್‌ ಬ್ಯಾಂಕ್‌ಗಳು ಸ್ವಿಸ್‌ ನ್ಯಾಷನಲ್‌ ಬ್ಯಾಂಕ್‌ಗೆ ನೀಡಿರುವ ಅಧಿಕೃತ ಮಾಹಿತಿ. ಇವು ಭಾರತದಲ್ಲಿ ವ್ಯಾಪಕವಾಗಿ ಚರ್ಚೆಯಾಗಿರುವ, ಭಾರತೀಯರು ಸ್ವಿಸ್‌ ಬ್ಯಾಂಕ್‌ಗಳಲ್ಲಿ ಇರಿಸಿದ್ದಾರೆ ಎನ್ನಲಾದ ‘ಕಪ್ಪುಹಣ’ಕ್ಕೆ ಸಂಬಂಧಿಸಿದ ವಿವರ ಅಲ್ಲ.

ಭಾರತೀಯರು ಸ್ವಿಸ್‌ ಬ್ಯಾಂಕ್‌ಗಳಲ್ಲಿ ಇರಿಸಿರುವ ಹಣವನ್ನು ‘ಕಪ್ಪು ಹಣ’ ಎಂದು ಕರೆಯಲು ಆಗದು ಎಂಬ ನಿಲುವನ್ನು ಅಲ್ಲಿನ ಅಧಿಕಾರಿಗಳು ಹಿಂದಿನಿಂದಲೂ ಹೊಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.