ADVERTISEMENT

ಬೈಜುಸ್‌ ವರಮಾನ ಹೆಚ್ಚಳ, ನಷ್ಟ ಇಳಿಕೆ

ಪಿಟಿಐ
Published 4 ನವೆಂಬರ್ 2023, 11:19 IST
Last Updated 4 ನವೆಂಬರ್ 2023, 11:19 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಆನ್‌ಲೈನ್‌ ಮೂಲಕ ಶಿಕ್ಷಣ ನೀಡುವ ಬೈಜುಸ್‌ ಸಂಸ್ಥೆಯು 2021–22ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದ ತನ್ನ ಆರ್ಥಿಕ ಫಲಿತಾಂಶವನ್ನು ಶನಿವಾರ ಪ್ರಕಟಿಸಿದೆ. ವರಮಾನದಲ್ಲಿ 2.5ರಷ್ಟು ಏರಿಕೆ ಕಂಡಿದ್ದರೆ ಕಾರ್ಯಾಚರಣಾ ನಷ್ಟವು ಶೇ 6ರಷ್ಟು ಇಳಿಕೆ ಆಗಿದೆ.

2021–22ರಲ್ಲಿ ಕಾರ್ಯಾಚರಣಾ ನಷ್ಟವು ಶೇ 6ರಷ್ಟು ಇಳಿಕೆ ಕಂಡು ₹2,253 ಕೋಟಿಗೆ ತಲಪಿದೆ. 2020–21ನೇ ಹಣಕಾಸು ವರ್ಷದಲ್ಲಿ ಕಾರ್ಯಾಚರಣಾ ನಷ್ಟವು ₹2,406 ಕೋಟಿಯಷ್ಟು ಇತ್ತು ಎಂದು ಸಂಸ್ಥೆಯು ತಿಳಿಸಿದೆ.

ಟ್ಯೂಷನ್‌ ಸೆಂಟರ್‌,1–12ನೇ ತರಗತಿಯಿವರೆಗಿನ ಶಿಕ್ಷಣ ಮತ್ತು ಅಪ್ಲಿಕೇಷನ್‌ ವಹಿವಾಟುಗಳಿಂದ ಬಂದಿರುವ ವರಮಾನವು 2021–22ರಲ್ಲಿ ಶೇ 2.3ರಷ್ಟು ಹೆಚ್ಚಾಗಿ ₹3,569 ಕೋಟಿಗೆ ತಲುಪಿದೆ. 2020–21ನೇ ಹಣಕಾಸು ವರ್ಷದಲ್ಲಿ ವರಮಾನವು ₹1,552 ಕೋಟಿಯಷ್ಟು ಇತ್ತು ಎಂದು ಅದು ತಿಳಿಸಿದೆ. ಸಂಸ್ಥೆಯು ಸ್ವಾಧೀನಪಡಿಸಿಕೊಂಡಿರುವ ಕಂಪನಿಗಳ ಆರ್ಥಿಕ ಸಾಧನೆಯನ್ನು ಈ ಹಣಕಾಸು ವರದಿಯು ಒಳಗೊಂಡಿಲ್ಲ ಎಂದು ಬೈಜುಸ್‌ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.